PRADAN Recruitment 2026 : ನೇಮಕಾತಿ ಅಧಿಸೂಚನೆ ಪ್ರಕಟವಾಗಿದೆ. ಜಿಲ್ಲಾ ಸಂಯೋಜಕ, ತಾಲೂಕು ಸಂಯೋಜಕ, ತರಬೇತಿ ಸಂಯೋಜಕ ಮತ್ತು Expert (Livelihoods) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ₹35,000 ರಿಂದ ₹1.10 ಲಕ್ಷವರೆಗೆ ವೇತನ, ಅರ್ಹತೆ, ಆಯ್ಕೆ ಪ್ರಕ್ರಿಯೆ, ಕೊನೆಯ ದಿನಾಂಕ ಮತ್ತು ಅರ್ಜಿ ವಿವರಗಳನ್ನು ತಿಳಿಯಿರಿ
ಕರ್ನಾಟಕ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಸಾಮಾಜಿಕ ಅಭಿವೃದ್ಧಿ, ಗ್ರಾಮೀಣ ಜೀವನೋಪಾಯ ಮತ್ತು ಸಮುದಾಯ ಅಭಿವೃದ್ಧಿ ಕ್ಷೇತ್ರದಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಗೆ ಉತ್ತಮ ಉದ್ಯೋಗಾವಕಾಶ ಲಭ್ಯವಾಗಿದೆ. ಪ್ರೊಫೆಷನಲ್ ಅಸಿಸ್ಟೆನ್ಸ್ ಫಾರ್ ಡೆವಲಪ್ಮೆಂಟ್ ಆಕ್ಷನ್ (PRADAN) ಸಂಸ್ಥೆ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.
ಈ ನೇಮಕಾತಿ ಪ್ರಕ್ರಿಯೆಯಲ್ಲಿ ಜಿಲ್ಲಾ ಸಂಯೋಜಕ (District Coordinator), ತಾಲೂಕು ಸಂಯೋಜಕ (Taluka Coordinator), ತರಬೇತಿ ಸಂಯೋಜಕ (Training Coordinator) ಮತ್ತು ತಜ್ಞ (ಜೀವನೋಪಾಯ) – Expert (Livelihoods) ಸೇರಿದಂತೆ ಒಟ್ಟು ನಾಲ್ಕು ಪ್ರಮುಖ ಹುದ್ದೆಗಳು ಸೇರಿವೆ. ಹುದ್ದೆಯ ಪ್ರಕಾರ ತಿಂಗಳಿಗೆ ₹35,000 ರಿಂದ ₹1,10,000 ವರೆಗೆ ವೇತನ ದೊರೆಯಲಿದ್ದು, ಸಮಾಜಮುಖಿ ಕೆಲಸಗಳಲ್ಲಿ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಇದು ದೊಡ್ಡ ಅವಕಾಶವಾಗಬಹುದು.
1. ನೇಮಕಾತಿ ಪಕ್ಷಿನೋಟ:
| ಸಂಸ್ಥೆಯ ಹೆಸರು | PRADAN |
| ಹುದ್ದೆಗಳ ಹೆಸರು | District Coordinator, Taluka Coordinator ಇತ್ಯಾದಿ |
| ಒಟ್ಟು ಹುದ್ದೆಗಳು | 07 |
| ವಿದ್ಯಾರ್ಹತೆ | Degree / PG |
| ವೇತನ | ₹35,000 – ₹ 1,10,000 |
| ಅರ್ಜಿ ವಿಧಾನ | Online |
| ಅರ್ಜಿ ಶುಲ್ಕ | ಇರುವುದಿಲ್ಲ |
| ಕೊನೆಯ ದಿನಾಂಕ | 07 June 2026 ಹಾಗೂ 08 June 2026 |
| ಸಂಸ್ಥೆಯ ಅಧಿಕೃತ್ ವೆಬ್ ಸೈಟ್ ಲಿಂಕ್ | https://www.pradan.net/ |
| ಅರ್ಜಿ ಸಲ್ಲಿಸುವ ಲಿಂಕ್ | ಈ ಲೇಖನ್ ಕೊನೆಯಲ್ಲಿದೆ. |
ಗ್ರಾಮೀಣ ಬಡತನ ನಿವಾರಣೆ, ಮಹಿಳಾ ಸಬಲೀಕರಣ, ಜೀವನೋಪಾಯ ವೃದ್ಧಿ, ತರಬೇತಿ ವ್ಯವಸ್ಥೆ, ಸರ್ಕಾರಿ ಯೋಜನೆಗಳ ಸಮನ್ವಯ ಹಾಗೂ ಸಮುದಾಯ ಅಭಿವೃದ್ಧಿ ಕ್ಷೇತ್ರಗಳಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿರುವವರು ಈ ಅವಕಾಶವನ್ನು ತಪ್ಪಿಸಿಕೊಳ್ಳಬಾರದು. ಹುದ್ದೆಯ ಪ್ರಕಾರ ಶಿಕ್ಷಣ, ಅನುಭವ, ಕೌಶಲ್ಯ ಮತ್ತು ಜವಾಬ್ದಾರಿಗಳು ಬದಲಾಗುತ್ತವೆ.
ಈ ಲೇಖನದಲ್ಲಿ PRADAN Recruitment 2026 ಕುರಿತ ಸಂಪೂರ್ಣ ಮಾಹಿತಿ, ವೇತನ, ಅರ್ಹತೆ, ಉದ್ಯೋಗ ಸ್ಥಳ, ಜವಾಬ್ದಾರಿಗಳು, ಅರ್ಜಿ ಸಲ್ಲಿಸುವ ವಿಧಾನ ಮತ್ತು ಪ್ರಮುಖ ದಿನಾಂಕಗಳ ಕುರಿತು ವಿವರವಾಗಿ ತಿಳಿಸಲಾಗಿದೆ.
2. PRADAN ಸಂಸ್ಥೆಯ ಬಗ್ಗೆ ಸಂಕ್ಷೀಪ್ತ ಮಾಹಿತಿ :
PRADAN (Professional Assistance for Development Action) ಸಂಸ್ಥೆಯು ಸಾಮಾಜಿಕ ಅಭಿವೃದ್ಧಿ ಮತ್ತು ಗ್ರಾಮೀಣ ಜೀವನೋಪಾಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಪ್ರಮುಖ ಸಂಸ್ಥೆಗಳಲ್ಲಿ ಒಂದಾಗಿದೆ. ಈ ಸಂಸ್ಥೆಯ ಉದ್ದೇಶ ಗ್ರಾಮೀಣ ಮತ್ತು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಜೀವನಮಟ್ಟವನ್ನು ಸುಧಾರಿಸುವುದು, ಸಮುದಾಯ ಆಧಾರಿತ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೊಳಿಸುವುದು ಮತ್ತು ಅತ್ಯಂತ ದುರ್ಬಲ ಕುಟುಂಬಗಳಿಗೆ ಜೀವನೋಪಾಯ ಬೆಂಬಲ ಒದಗಿಸುವುದಾಗಿದೆ.
ಈಗ ಸಂಸ್ಥೆಯು ವಿವಿಧ ಹುದ್ದೆಗಳಿಗೆ ನೇಮಕಾತಿ ಪ್ರಕಟಿಸಿದ್ದು, ಗ್ರಾಮೀಣ ಅಭಿವೃದ್ಧಿ ಕ್ಷೇತ್ರದಲ್ಲಿ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಉತ್ತಮ ಅವಕಾಶವನ್ನು ನೀಡುತ್ತಿದೆ.
3. ಹುದ್ದೆಗಳ ಸಂಪೂರ್ಣ ವಿವರ :
PRADAN Recruitment 2026 ಅಡಿಯಲ್ಲಿ ನಾಲ್ಕು ಪ್ರಮುಖ ಹುದ್ದೆಗಳ ನೇಮಕಾತಿ ನಡೆಯಲಿದೆ. ಕೆಲವು ಹುದ್ದೆಗಳು ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇದ್ದರೆ, ಕೆಲವು ರಾಷ್ಟ್ರೀಯ ಮಟ್ಟದ ಜವಾಬ್ದಾರಿಯನ್ನು ಒಳಗೊಂಡಿವೆ.
| ಕ್ರ ಸಂ | ಹುದ್ದೆಯ ಹೆಸರು | ಸ್ಥಳ | ಹುದ್ದೆಗಳ ಸಂಖ್ಯೆ | ಮಾಸಿಕ ವೇತನ. |
| 1 | Expert (Livelihoods) | ನವದೆಹಲಿ – NSO ಕೇಂದ್ರ ತಂಡ / NMMU | 1 | ₹95,000 – ₹1,10,000 |
| 2 | District Coordinator | ಚಾಮರಾಜನಗರ ಜಿಲ್ಲೆ | 1 | ₹50,000 CTC |
| 3 | Training Coordinator | ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳು | 1 | ₹50,000 CTC |
| 4 | Taluka Coordinator | ಗುಂಡ್ಲುಪೇಟೆ – ಚಾಮರಾಜನಗರ
ಕಂಪ್ಲಿ – ಬಳ್ಳಾರಿ ಕಮಲಾನಗರ – ಬೀದರ ಮಸ್ಕಿ – ರಾಯಚೂರು |
4 | ₹35,000 CTC |
3.1. ಹುದ್ದೆಯ ಹೆಸರು: ಜಿಲ್ಲಾ ಸಂಯೋಜಕ (District Coordinator) :
ಈ ಹುದ್ದೆಗೆ ಒಟ್ಟು 1 ಖಾಲಿ ಹುದ್ದೆ ಲಭ್ಯವಿದೆ. ಜಿಲ್ಲಾ ಮಟ್ಟದಲ್ಲಿ ಕಾರ್ಯಕ್ರಮದ ಸಮಗ್ರ ಜವಾಬ್ದಾರಿಯನ್ನು ನಿರ್ವಹಿಸಲು ಈ ಹುದ್ದೆಯನ್ನು ರಚಿಸಲಾಗಿದೆ.
-
ಹುದ್ದೆಗಳ ಸಂಖ್ಯೆ: 1
-
ಶೈಕ್ಷಣೀಕ ಅರ್ಹತೆ:
- ಯಾವುದೇ ವಿಷಯದಲ್ಲಿ ಸ್ನಾತಕೋತ್ತರ ಪದವಿ ಅಥವಾ ವೃತ್ತಿಪರ ಪದವಿ
- ಗ್ರಾಮೀಣ ನಿರ್ವಹಣೆ/ಸಾಮಾಜಿಕ ವಿಜ್ಞಾನಗಳಲ್ಲಿ ಡಿಪ್ಲೊಮಾ ಇದ್ದರೆ ಉತ್ತಮ
- ಸಾಮಾಜಿಕ ಅಭಿವೃದ್ಧಿ ಕ್ಷೇತ್ರದಲ್ಲಿ ಕನಿಷ್ಠ 7 ವರ್ಷಗಳ ಅನುಭವ
- ಅದರಲ್ಲಿ 2 ವರ್ಷಗಳ ನಿರ್ವಹಣಾ ಅನುಭವ
- ಉದ್ಯೋಗ ಸ್ಥಳ: ಚಾಮರಾಜನಗರ ಜಿಲ್ಲೆ
- ವೇತನ: ತಿಂಗಳಿಗೆ ₹50,000 CTC
- ಭಾಷಾ ಕೌಶಲ್ಯ: ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಓದು, ಬರವಣಿಗೆ ಹಾಗೂ ಮಾತನಾಡುವ ಸಾಮರ್ಥ್ಯ ಅಗತ್ಯ.
- ಪ್ರಮುಖ ಕರ್ತವ್ಯಗಳು:
- ಆಯ್ಕೆಯಾದ ಅಭ್ಯರ್ಥಿಯು ಜಿಲ್ಲೆಯಲ್ಲಿನ ಅತಿ ಬಡತನ ನಿವಾರಣಾ ಕಾರ್ಯಕ್ರಮದ ಕಾರ್ಯನಿರ್ವಹಣೆಯನ್ನು ಮೇಲ್ವಿಚಾರಣೆ ಮಾಡಬೇಕಾಗುತ್ತದೆ.
- ತಾಲೂಕು ಸಂಯೋಜಕರು ಮತ್ತು ಮಾಸ್ಟರ್ ಟ್ರೈನರ್‌ಗಳಿಗೆ ಮಾರ್ಗದರ್ಶನ ನೀಡುವುದು, ತರಬೇತಿ ಅಗತ್ಯಗಳನ್ನು ಗುರುತಿಸುವುದು, ಯೋಜನೆಯ ಅನುಷ್ಠಾನವನ್ನು ಪರಿಶೀಲಿಸುವುದು
- ವಿವಿಧ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸುವುದು ಪ್ರಮುಖ ಕರ್ತವ್ಯವಾಗಿರುತ್ತದೆ.
- ಅದರ ಜೊತೆಗೆ MIS ವರದಿಗಳನ್ನು ಸಂಗ್ರಹಿಸಿ ಜಿಲ್ಲಾ ಮತ್ತು ರಾಜ್ಯ ಮಟ್ಟದ ಯೋಜನಾ ಘಟಕಗಳಿಗೆ ಸಲ್ಲಿಸುವುದು,
- ಕ್ಷೇತ್ರ ಭೇಟಿ ನಡೆಸಿ ಪ್ರತಿಕ್ರಿಯೆ ಸಂಗ್ರಹಿಸುವುದು ಮತ್ತು ಉತ್ತಮ ಕಾರ್ಯಪದ್ಧತಿಗಳನ್ನು ದಾಖಲಿಸುವ ಕೆಲಸಗಳನ್ನೂ ನಿರ್ವಹಿಸಬೇಕಾಗುತ್ತದೆ.
3.2. ಹುದ್ದೆಯ ಹೆಸರು: ತಾಲೂಕು ಸಂಯೋಜಕ (Taluka Coordinator)
- ಹುದ್ದೆಗಳ ಸಂಖ್ಯೆ: 4
ಈ ಹುದ್ದೆಗೆ ಒಟ್ಟು 4 ಖಾಲಿ ಹುದ್ದೆಗಳಿವೆ. ಕ್ಷೇತ್ರ ಮಟ್ಟದಲ್ಲಿ ನೇರವಾಗಿ ಸಮುದಾಯಗಳೊಂದಿಗೆ ಕೆಲಸ ಮಾಡಲು ಬಯಸುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ.
- ಶೈಕ್ಷಣೀಕ ಅರ್ಹತೆ:
- ಯಾವುದೇ ವಿಷಯದಲ್ಲಿ ಕನಿಷ್ಠ 50% ಅಂಕಗಳೊಂದಿಗೆ ಪದವಿ.
- ಸಾಮಾಜಿಕ ಅಭಿವೃದ್ಧಿ ಕ್ಷೇತ್ರದಲ್ಲಿ ಕನಿಷ್ಠ 3 ವರ್ಷಗಳ ಅನುಭವ.
- ಗ್ರಾಮೀಣ ಅಥವಾ ಹಿಂದುಳಿದ ಸಮುದಾಯಗಳೊಂದಿಗೆ ಕೆಲಸ ಮಾಡಿದ ಅನುಭವ
- ಉದ್ಯೋಗ ಸ್ಥಳಗಳು:
- ಗುಂಡ್ಲುಪೇಟೆ – ಚಾಮರಾಜನಗರ
- ಕಂಪ್ಲಿ – ಬಳ್ಳಾರಿ
- ಕಮಲಾನಗರ – ಬೀದರ
- ಮಸ್ಕಿ – ರಾಯಚೂರು
- ವೇತನ: ತಿಂಗಳಿಗೆ ₹35,000 CTC
- ಪ್ರಮುಖ ಕರ್ತವ್ಯಗಳು
- ಆಯ್ಕೆಯಾದ ಅಭ್ಯರ್ಥಿಗಳು ಸಮುದಾಯ ಸಂಪನ್ಮೂಲ ವ್ಯಕ್ತಿಗಳ (CRPs) ಜೊತೆಗೂಡಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಕುಟುಂಬಗಳನ್ನು ಗುರುತಿಸುವುದು,
- ಕಾರ್ಯಯೋಜನೆ ರೂಪಿಸುವುದು, ತರಬೇತಿ ಮತ್ತು ಕ್ಷೇತ್ರ ಮಟ್ಟದ ಬೆಂಬಲ ಒದಗಿಸುವ ಕೆಲಸ ಮಾಡಬೇಕಾಗುತ್ತದೆ.
- ಇದರ ಜೊತೆಗೆ ಪಂಚಾಯತ್ ಹಾಗೂ ತಾಲೂಕು ಮಟ್ಟದ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಸರ್ಕಾರಿ ಯೋಜನೆಗಳ ಪ್ರಯೋಜನಗಳನ್ನು ಗುರಿ ಕುಟುಂಬಗಳಿಗೆ ತಲುಪಿಸುವ ಜವಾಬ್ದಾರಿಯೂ ಇರುತ್ತದೆ.
- MIS ಮಾಹಿತಿ ನಿರ್ವಹಣೆ, ವರದಿ ಸಲ್ಲಿಕೆ, ಸಭೆ ಆಯೋಜನೆ ಮತ್ತು ಕ್ಷೇತ್ರ ಪರಿಶೀಲನೆಗಳು ಈ ಹುದ್ದೆಯ ಪ್ರಮುಖ ಭಾಗವಾಗಿರುತ್ತವೆ.
3.3. ತರಬೇತಿ ಸಂಯೋಜಕ (Training Coordinator)
- ಹುದ್ದೆಗಳ ಸಂಖ್ಯೆ: 1
PRADAN ಸಂಸ್ಥೆಯಲ್ಲಿ ತರಬೇತಿ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಈ ಹುದ್ದೆ ಪ್ರಮುಖವಾಗಿದೆ. ಒಟ್ಟು 1 ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.
- ಶೈಕ್ಷಣೀಕ ಅರ್ಹತೆ:
- ಸ್ನಾತಕೋತ್ತರ ಪದವಿ ಅಥವಾ ವೃತ್ತಿಪರ ಪದವಿ
- ಗ್ರಾಮೀಣ ನಿರ್ವಹಣೆ/ಸಾಮಾಜಿಕ ವಿಜ್ಞಾನಗಳಲ್ಲಿ ಡಿಪ್ಲೊಮಾ
- ಸಾಮಾಜಿಕ ಅಭಿವೃದ್ಧಿ ಕ್ಷೇತ್ರದಲ್ಲಿ ಕನಿಷ್ಠ 7 ವರ್ಷಗಳ ಅನುಭವ
- ಕನಿಷ್ಠ 2 ವರ್ಷಗಳ ತರಬೇತಿ ನಿರ್ವಹಣಾ ಅನುಭವ
- ಉದ್ಯೋಗ ಸ್ಥಳ: ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳು
- ವೇತನ: ₹50,000 CTC
- ಪ್ರಮುಖ ಕರ್ತವ್ಯಗಳು:
- ಈ ಹುದ್ದೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ತರಬೇತಿ ಅಗತ್ಯಗಳನ್ನು ಗುರುತಿಸಿ,
- ತರಬೇತಿ ವಿಷಯಗಳನ್ನು ರೂಪಿಸುವುದು, ಮಾಸ್ಟರ್ ಟ್ರೈನರ್‌ಗಳಿಗೆ ಮಾರ್ಗದರ್ಶನ ನೀಡುವುದು.
- ಕಾರ್ಯಕ್ರಮದಲ್ಲಿ ಭಾಗವಹಿಸುವ ವ್ಯಕ್ತಿಗಳು/ಕುಟುಂಬಗಳಿಗೆ ಸರಿಯಾದ ಸಮಯಕ್ಕೆ ತರಬೇತಿ ದೊರೆಯುವಂತೆ ನೋಡಿಕೊಳ್ಳಬೇಕಾಗುತ್ತದೆ.
- ತರಬೇತಿ ಗುಣಮಟ್ಟವನ್ನು ಪರಿಶೀಲಿಸುವುದು, ಪ್ರತಿಕ್ರಿಯೆ ಸಂಗ್ರಹಿಸುವುದು ಮತ್ತು ಅಗತ್ಯ ತಿದ್ದುಪಡಿ ಕೈಗೊಳ್ಳುವುದು ಸಹ ಮುಖ್ಯ ಜವಾಬ್ದಾರಿಗಳಾಗಿರುತ್ತವೆ.
- ಜಿಲ್ಲಾ ಕಾರ್ಯಕ್ರಮ ನಿರ್ವಹಣಾ ಘಟಕ (DPMU), ರಾಜ್ಯ ಕಾರ್ಯಕ್ರಮ ನಿರ್ವಹಣಾ ಘಟಕ (SPMU) ಮತ್ತು ಜಿಲ್ಲಾ ಸಂಯೋಜಕರೊಂದಿಗೆ ಸಮನ್ವಯ ಸಾಧಿಸಿ ತರಬೇತಿ ವ್ಯವಸ್ಥೆಯನ್ನು ಸುಧಾರಿಸುವ ಜವಾಬ್ದಾರಿ ಈ ಹುದ್ದೆಗೆ ಸೇರಿದೆ.
3.4. ತಜ್ಞ (ಜೀವನೋಪಾಯ) – Expert (Livelihoods)
- ಹುದ್ದೆಗಳ ಸಂಖ್ಯೆ: 1
ಇದು ಹೆಚ್ಚು ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ನೀಡಲಾಗುತ್ತಿರುವ ಹಿರಿಯ ಹುದ್ದೆಯಾಗಿದೆ. ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಪಶುಸಂಗೋಪನೆ ಮತ್ತು ಗ್ರಾಮೀಣ ಜೀವನೋಪಾಯ ಕ್ಷೇತ್ರಗಳಲ್ಲಿ ಪರಿಣತಿ ಹೊಂದಿರುವವರಿಗೆ ಇದು ಉತ್ತಮ ಅವಕಾಶವಾಗಿದೆ.
- ಶೈಕ್ಷಣೀಕ ಅರ್ಹತೆ:
- ಕೃಷಿ/ತೋಟಗಾರಿಕೆ/ಮೀನುಗಾರಿಕೆ/ಪಶುಸಂಗೋಪನೆ ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿ
- ಗ್ರಾಮೀಣ ಜೀವನೋಪಾಯ ಕ್ಷೇತ್ರದಲ್ಲಿ ಕನಿಷ್ಠ 10 ವರ್ಷಗಳ ಅನುಭವ
- ತರಬೇತಿ, ಮಾದರಿ ಅಭಿವೃದ್ಧಿ ಮತ್ತು ತಾಂತ್ರಿಕ ಮಾರ್ಗದರ್ಶನದಲ್ಲಿ ಪರಿಣತಿ
- ವೇತನ: ₹95,000 ರಿಂದ ₹1,10,000
- ಉದ್ಯೋಗ ಸ್ಥಳ: ನವದೆಹಲಿ – NSO ಕೇಂದ್ರ ತಂಡ / NMMU
- ಅಭ್ಯರ್ಥಿಗಳಿಗೆ ಬೇಕಾದ ಕೌಶಲ್ಯಗಳು
- ಈ ನೇಮಕಾತಿಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೇವಲ ಪದವಿ ಅಥವಾ ಅನುಭವವಷ್ಟೇ ಹೊಂದಿದ್ದರೆ ಸಾಕಾಗುವುದಿಲ್ಲ.
- ಪರಿಣಾಮಕಾರಿ ಸಂವಹನ, ತಂಡ ನಿರ್ವಹಣೆ, ವರದಿ ಬರವಣಿಗೆ, ಕ್ಷೇತ್ರ ಪರಿಶೀಲನೆ, ಸಮನ್ವಯ ಮತ್ತು ನಾಯಕತ್ವ ಗುಣಗಳೂ ಅಗತ್ಯವಾಗಿವೆ.
- ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಉತ್ತಮ ಸಂವಹನ ಕೌಶಲ್ಯ ಇದ್ದರೆ ಹೆಚ್ಚುವರಿ ಪ್ರಯೋಜನ ಸಿಗಬಹುದು.
- ಪ್ರಮುಖ ಕರ್ತವ್ಯಗಳು:
- ಈ ಹುದ್ದೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಜೀವನೋಪಾಯ ಮಾದರಿಗಳನ್ನು ಅಭಿವೃದ್ಧಿಪಡಿಸುವುದು,
- ರಾಜ್ಯ ಗ್ರಾಮೀಣ ಜೀವನೋಪಾಯ ಮಿಷನ್ (SRLM) ಮತ್ತು DAY-NRLM ಯೋಜನೆಗಳೊಂದಿಗೆ ಕೆಲಸ ಮಾಡುವುದು,
- ತರಬೇತಿ ಪಠ್ಯಕ್ರಮ ಸಿದ್ಧಪಡಿಸುವುದು ಹಾಗೂ ದೊಡ್ಡ ಮಟ್ಟದ ಕಾರ್ಯಕ್ರಮಗಳಿಗೆ ತಾಂತ್ರಿಕ ಬೆಂಬಲ ನೀಡುವ ಜವಾಬ್ದಾರಿಯನ್ನು ನಿರ್ವಹಿಸಬೇಕಾಗುತ್ತದೆ.
- ಆಯ್ಕೆಯಾದ ಅಭ್ಯರ್ಥಿಯು ರಾಷ್ಟ್ರೀಯ ಮಟ್ಟದ ಸಭೆಗಳು, ಕಾರ್ಯಾಗಾರಗಳು ಮತ್ತು ನೀತಿ ಚರ್ಚೆಗಳಲ್ಲಿ ಭಾಗವಹಿಸುವ ಅವಕಾಶವನ್ನೂ ಪಡೆಯಬಹುದು.
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
- ಜಿಲ್ಲಾ ಸಂಯೋಜಕ, ತಾಲೂಕು ಸಂಯೋಜಕ ಹಾಗೂ ತರಬೇತಿ ಸಂಯೋಜಕ ಹುದ್ದೆಗಳಿಗೆ ಕೊನೆಯ ದಿನಾಂಕ: ಜೂನ್ 8, 2026
- ತಜ್ಞ (ಜೀವನೋಪಾಯ) ಹುದ್ದೆಗೆ ಕೊನೆಯ ದಿನಾಂಕ: ಜೂನ್ 7, 2026
- ಅಭ್ಯರ್ಥಿಗಳು ಕೊನೆಯ ದಿನಾಂಕದವರೆಗೆ ಕಾಯದೆ ಮುಂಚಿತವಾಗಿ ಅರ್ಜಿ ಸಲ್ಲಿಸುವುದು ಉತ್ತಮ.
- ಅರ್ಜಿ ಸಲ್ಲಿಸುವ ವಿಧಾನ
- ಅರ್ಹ ಅಭ್ಯರ್ಥಿಗಳು ತಮ್ಮ CV ಅನ್ನು Google Form ಮೂಲಕ ಸಲ್ಲಿಸಬೇಕು.
- District Coordinator / Taluka Coordinator / Training Coordinator ಅರ್ಜಿ ಲಿಂಕ್: https://forms.gle/Ygb7JPDzecBG2H768
- Expert (Livelihoods) ಅರ್ಜಿ ಲಿಂಕ್: https://forms.gle/b8EmZfFui6RrBryw9
ಅರ್ಜಿ ಸಲ್ಲಿಸುವ ಮೊದಲು ಶೈಕ್ಷಣಿಕ ದಾಖಲೆಗಳು, ಅನುಭವ ಪ್ರಮಾಣಪತ್ರಗಳು ಮತ್ತು ರೆಸ್ಯೂಮ್ ಅನ್ನು ಸರಿಯಾಗಿ ಸಿದ್ಧಪಡಿಸಿಕೊಳ್ಳುವುದು ಉತ್ತಮ.
- ಆಯ್ಕೆ ಪ್ರಕ್ರಿಯೆ ಹೇಗಿರಬಹುದು?
ಸಂಸ್ಥೆಯ ಅವಶ್ಯಕತೆಗಳ ಆಧಾರದ ಮೇಲೆ ಅಭ್ಯರ್ಥಿಗಳ ಅನುಭವ, ಶೈಕ್ಷಣಿಕ ಅರ್ಹತೆ, ಕ್ಷೇತ್ರ ಜ್ಞಾನ ಹಾಗೂ ಸಂದರ್ಶನದ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯುವ ಸಾಧ್ಯತೆ ಇದೆ. ಸಾಮಾಜಿಕ ಅಭಿವೃದ್ಧಿ ಕ್ಷೇತ್ರದಲ್ಲಿ ಉತ್ತಮ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಹೆಚ್ಚಿನ ಆದ್ಯತೆ ಸಿಗುವ ಸಾಧ್ಯತೆಯೂ ಇದೆ.
2 thoughts on “PRADAN Recruitment 2026: ₹35,000 ರಿಂದ ₹1.10 ಲಕ್ಷ ವೇತನ! ಜಿಲ್ಲಾ ಸಂಯೋಜಕ, ತಾಲೂಕು ಸಂಯೋಜಕ ಸೇರಿ ಹಲವು ಹುದ್ದೆಗಳ ನೇಮಕಾತಿ”