ಎಸ್.ಬಿ.ಐ ಬ್ಯಾಂಕ್ ನಲ್ಲಿ ಭರ್ಜರಿ ನೇಮಕಾತಿ 2026 – SBI Probationary Officer Recruitment 2026
SBI Probationary Officer Recruitment 2026: ದೇಶದ ಅತ್ಯಂತ ದೊಡ್ಡ ಸಾರ್ವಜನಿಕ ಬ್ಯಾಂಕಗಳಲ್ಲಿ ಒಂದಾದ ಸ್ಟೇಟ್ ಬ್ಯಾಂಕ ಆಫ್ ಇಂಡಿಯಾದಲ್ಲಿ ಪ್ರೋಬೆಷನರಿ ಆಫೀಸರ್ ಹುದ್ದೆಗಳಿಗೆ ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಸಂಬಂದಿಸಿದಂತೆ ನೇಮಕಾತಿ ವಿಧಾನ, ಶೈಕ್ಷಣಿಕ ಅರ್ಹತೆ, ಮೀಸಲಾತಿ, ಹುದ್ದೆಗಳ ಸಂಖ್ಯೆ ಇನ್ನಿತರ ಅವಶ್ಯವಿರುವ ಮಾಹಿತಿಯನ್ನು ಈ ಕೆಳಗೆ ವಿವರವಾಗಿ ನೀಡಲಾಗಿದೆ. ಈ ಲೇಖನವನ್ನು ಪೂರ್ತಿಯಾಗಿ ಓದಿ.
SBI Probationary Officer Recruitment 2026: Full Details
ನಮ್ಮ ಬೆಂಬಲಿಸಿ:
Watsapp Group – Join Teligraam Group – Join
ಹುದ್ದೆಗಳು ವಿವರ:
- ಹುದ್ದೆಯ ಹೆಸರು: ಪ್ರೊಭೇಷನರಿ ಆಫೀಸರ್ (Probationary Officer)
- ಹುದ್ದೆಗಳ ಸಂಖ್ಯೆ: ಈ ನೇಮಕಾತಿ ಆದೇಶದ ಪ್ರಕಾರ ಒಟ್ಟು 1500 ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
- ಕಾರ್ಯನಿರ್ವಹಣಾ ಸ್ಥಳ: ಪ್ರೊಬೇಷನರಿ ಆಫೀಸರ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಭಾರತದೆಲ್ಲೆಡೆ ಕೆಲಸ ನಿರ್ವಹಿಸಬೇಕು.
- ಹುದ್ದೆಗಳ ಸಂಖ್ಯೆ: ಒಟ್ಟು 1500 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
| ಕೆಟಗೇರಿ | ಹುದ್ದೆಗಳ ಸಂಖ್ಯೆ |
| ರೆಗ್ಯೂಲರ್ | 1446 |
| ಬ್ಯಾಕ್ ಲಾಗ್ | 54 |
ಇದನ್ನು ಓದಿ: ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ; ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
SBI Probationary Officer Recruitment 2026
ಶೈಕ್ಷಣಿಕ ಅರ್ಹತೆ:
ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಸರ್ಕಾರದಿಂದ ಮಾನ್ಯತೆ ಪಡೆದಿರುವ ವಿದ್ಯಾಸಂಸ್ಥೆ/ಮಹಾವಿದ್ಯಾಲಯದಲ್ಲಿ ಯಾವುದೆ ಪದವಿಯಲ್ಲಿ ತೇರ್ಗಡೆಯಾಗಿರಬೇಕು. ಅಂತಿಮ ವರ್ಷ ಅಥವಾ ಅಂತಿಮ ಸೆಮಿಸ್ಟರ್ ನಲ್ಲಿ ಅಧ್ಯಯನ ಮಾಡುತ್ತಿರುವ ವಿಧ್ಯಾರ್ಥಿಗಳು ಸಹ ಅರ್ಜಿ ಸಲ್ಲಿಸಬಹುದು. ಆದರೆ 30.09.2026 ರಂದು ನಡೆಯುವ ಸಂದರ್ಶನ ಸಂದರ್ಭದಲ್ಲಿ ಪದವಿ ಪರಿಕ್ಷೆಯಲ್ಲಿ ಪಾಸ್ ಆಗಿರಬೇಕು ಮತ್ತು ಅದರ ದಾಖಲೆಗಳನ್ನು ಒದಗಿಸಬೇಕು.
SBI Probationary Officer Recruitment 2026 Age Details
ವಯೋಮಿತಿ:
ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು ದಿನಾಂಕ 01/04/2026 ಈ ಕೆಳಗಿನಂತೆ ಹೊಂದಿರಬೇಕು
- ಕನಿಷ್ಠ 21 ವರ್ಷ
- ಗರಿಷ್ಠ 30 ವರ್ಷ
ವಯೋಮಿತಿ ಸಡಿಲಿಕೆ:
- ಪರಿಶೀಷ್ಟ ಜಾತಿ, ಪಂಗಡದ ಅಭ್ಯರ್ಥಿಗಳಿಗೆ – 5 ವರ್ಷ
- ಇತರೆ ಹಿಂದುಳಿದ ವರ್ಗದ(NCL) ಅಭ್ಯರ್ಥಿಗಳಿಗೆ – 3 ವರ್ಷ
- PWBD (UR/EWS) ಅಭ್ಯರ್ಥಿಗಳಿಗೆ – 10 ವರ್ಷ
- PWBD (OBC) ಅಭ್ಯರ್ಥಿಗಳಿಗೆ – 13 ವರ್ಷ
- PWBD (SC/ST) ಅಭ್ಯರ್ಥಿಗಳಿಗೆ – 15 ವರ್ಷ
ಇದನ್ನು ಓದಿ: ಸರ್ಕಾರದಿಂದ ಮಹಿಳಾ ಸ್ವ ಸಹಾಯ ಸಂಘಗಳಿಗೆ ಭರ್ಜರಿ ಗಿಪ್ಟ್, 7 ರಿಂದ 15 ಲಕ್ಷದ ವರೆಗೆ ಸಹಾಯಧನ, ಇಲ್ಲಿದೆ ಸಂಪೂರ್ಣ ಮಾಹಿತಿ
ವೇತನ:SBI Probationary Officer Recruitment 2026 Salary
ಪ್ರೊಭೆಷನರಿ ಆಫಿಸರ್ ಹುದ್ದೆಗಳಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕವಾಗಿ ರೂ 48,480 ರಿಂದ ರೂ. 85,920 ಶ್ರೇಣಿಯಲ್ಲಿ ವೇತನ ಪಾವತಿಸಲಾಗುತ್ತದೆ. ಹೀಗೆ ವಿವಿಧ ಭತ್ಯೆಗಳನ್ನು ಒಳಗೊಂಡಂತೆ ವಾರ್ಷಿಕವಾಗಿ ಸುಮಾರು 21.97 ಲಕ್ಷಗಳ ವರೆಗೆ ಪಾವತಿಸುವ ಸಾದ್ಯತೆ ಇದೆ. ಅದರೊಂದಿಗೆ ಅಭ್ಯರ್ಥಿಯು ಮೂರು ವರ್ಷಗಳ ಅವಧಿಗೆ 2 ಲಕ್ಷ ರೂ. ಸೇವಾ ಬಾಂಡಗೆ ಸಹಿ ಹಾಕಬೇಕಾಗುತ್ತದೆ.
ಆಯ್ಕೆ ವಿಧಾನ:SBI Probationary Officer Recruitment 2026 Selection method
- Phase – 1 ಪ್ರಾಥಮಿಕ ಪರೀಕ್ಷೆ: ಅಭ್ಯರ್ಥಿಯು ಇದರಲ್ಲಿ ಇಂಗ್ಲಿಷ್ ಭಾಷೆ, ತಾರ್ಕಿಕ್ ಸಾಮರ್ಥ್ಯ ಮತ್ತು ಪರಿಮಾಣಾತ್ಮಕ ಸಾಮರ್ಥ್ಯದ ವಸ್ತುನಿಷ್ಟ ಪ್ರಶ್ನೆಗಳನ್ನು ಎದುರಿಸಬೇಕಾಗುತ್ತದೆ.
- Phase – 2 ಮುಖ್ಯ ಪರಿಕ್ಷೆ: ಪ್ರಾಥಮಿಕ ಪರಿಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಮುಖ್ಯ ಪರಿಕ್ಷೆ ಬರೆಯಲು ಆಯ್ಕೆಯಾಗುತ್ತಾರೆ. ಇಲ್ಲಿ ವಸ್ತು ನಿಷ್ಟ ಮತ್ತು ವಿವರಣಾತ್ಮಕ ಪ್ರಶ್ನೆಗಳಿಗೆ ಉತ್ತರಿಸಬೇಕು.
- Phase – 3 ಅಂತಿಮ ಹಂತ: ಅಭ್ಯರ್ಥಿಯು ಮೇಲಿನ ಪ್ರಾಥಮಿಕ ಮತ್ತು ಮುಖ್ಯ ಪರಿಕ್ಷೆಯಲ್ಲಿ ಉತ್ತೀರ್ಣ ಆದರೆ ಮಾತ್ರ ಸೈಕೋಮೆಟ್ರಿಕ್ ಟೆಸ್ಟ್, ಗ್ರೂಪ್ ಎಕ್ಸರ್ಸೈಜ್, ಸಂದರ್ಶನವನ್ನು ಎದುರಿಸಬೇಕು.
ಪರಿಕ್ಷಾ ಮಾಹಿತಿ (Exam Details) :
-
Phase – 1 – ಪ್ರಿಲಿಮಿನರಿ ಪರೀಕ್ಷೆ (Preliminary Exam)–
| ಪರೀಕ್ಷೆಯ ಹೆಸರು | ಪ್ರಶ್ನೆಗಳ ಸಂಖ್ಯೆ | ಗರಿಷ್ಟ ಅಂಕಗಳು | ಅವಧಿ |
| ಇಂಗ್ಲೀಷ ಭಾಷೆ | 40 | – | 20 ನಿಮಿಷ |
| ಕ್ವಾಂಟಿಟಿವ್ ಅಪ್ಟಿಟ್ಯೂಡ್ | 30 | – | 20 ನಿಮಿಷ |
| ರೀಸನಿಂಗ್ ಎಬಿಲಿಟಿ | 30 | – | 20 ನಿಮಿಷ |
| ಒಟ್ಟು | 100 | 100 | 60 ನಿಮಿಷ |
ಕರ್ನಾಟಕದಲ್ಲಿ ಪರೀಕ್ಷಾ ಕೇಂದ್ರಗಳು – ಬೆಳಗಾವಿ, ಬೆಂಗಳೂರು, ಧಾರವಾಡ/ಹುಬ್ಬಳ್ಳಿ, ಮಂಗಳೂರು, ಮೈಸುರು, ಶಿವಮೋಗ್ಗ, ಉಡುಪಿ
-
Phase – 2 – ಮುಖ್ಯ ಪರೀಕ್ಷೆ(Main Exam) –
| ಪರೀಕ್ಷೆಯ ಹೆಸರು | ಪ್ರಶ್ನೆಗಳ ಸಂಖ್ಯೆ | ಗರಿಷ್ಠ ಅಂಕಗಳು | ಅವಧಿ |
| ರೀಸನಿಂಗ್ & ಕಂಪ್ಯೂಟರ್ ಅಪ್ಟಿಟ್ಯೂಡ್ | 40 | 60 | 50 ನಿಮಿಷ |
| ಡೇಟಾ ಅನಾಲಿಸಿಸ್ & ಇಂಟಪ್ರೀಟೆಶನ್ | 30 | 60 | 45 ನಿಮಿಷ |
| ಜನರಲ್ ಅವೇರ್ನೆಸ್/ ಎಕಾನಮಿ/ ಬ್ಯಾಂಕಿಂಗ್ ನಾಲೇಡ್ಜ್ | 60 | 60 | 45 ನಿಮಿಷ |
| ಇಂಗ್ಲೀಷ್ ಲಾಂಗ್ವೇಜ್ | 40 | 20 | 40 ನಿಮಿಷ |
| ಒಟ್ಟು | 170 | 200 | 3 ತಾಸು |
ಕರ್ನಾಟಕದಲ್ಲಿರುವ ಪರೀಕ್ಷಾ ಕೇಂದ್ರಗಳು: ಬೆಂಗಳೂರು. ಧಾರವಾಡ/ಹುಬ್ಬಳ್ಳಿ, ಮೈಸೂರು
ಅರ್ಜಿ ಸಲ್ಲಿಸುವ ವಿಧಾನ:
ಪ್ರೊಭೆಷನರಿ ಆಫಿಸರ್ ಹುದ್ದೆಗಳಿಗೆ ಸೇರ ಬಯಸುವ ಅಭ್ಯರ್ಥಗಳು ಆನ್ ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.
- ಹಂತ – 1 ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ, ಅಧಿಸೂಚನೆಯನ್ನು ಸರಿಯಾಗಿ ಓದಿಕೊಂಡು, ಅವಶ್ಯವಿರುವ ಧಾಖಲೆಗಳನ್ನು ಸಿದ್ದಪಡಿಸಿಕೊಂಡು ಅರ್ಜಿ ಸಲ್ಲಿಸಬೇಕು.
- ಹಂತ – 2 ಬ್ಯಾಂಕಿನ ವೆಬ್ ಸೈಟ್ ಗೆ ಭೇಟಿ ನೀಡಿ ಅಥವಾ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿ ತೆರೆದುಕೊಳ್ಳುತ್ತದೆ.
- ಹಂತ – 3 ಅಪ್ಲಿಕೇಷನ್ ನಲ್ಲಿ ತಿಳಿಸಿರುವ ಎಲ್ಲಾ ಮಾಹಿತಿಗಳನ್ನು (ಉದಾಹರಣೆಗೆ: ಅಭ್ಯರ್ಥಿಯ ಹೆಸರು, ವಿಳಾಸ, ಶೈಕ್ಷಣೀಕ ವಿದ್ಯಾರ್ಹತೆ, ಮೊಬೈಲ್ ಇತ್ಯಾದಿ) ಭರ್ತಿ ಮಾಡುವುದು. ನಂತರ ಎಂಟ್ರಿ ಮಾಡಿದ ಮಾಹಿತಿ ಸರಿಯಾಗಿದೆಯೆ ಎಂದು ಪರಿಶೀಲಿಸಿ, ಮುಂದಿನ ಹಂತಕ್ಕೆ ತೆರಳುವುದು.
- ಹಂತ – 4 ಅರ್ಜಿ ಶುಲ್ಕ ಪಾವತಿಸುವುದು.
- ಅನ್ ರಿಸರ್ವಡ್/EWS/OBC ಅಭ್ಯರ್ಥಿಗಳು – ರೂ 750/-
- SC/ST/PWBD ಅಭ್ಯರ್ಥಿಗಳಿಗೆ ಶುಲ್ಕ ಇರುವುದಿಲ್ಲ.
ಶುಲ್ಕ ಪಾವತಿಸುವ ವಿಧಾನ:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಆನ್ ಲೈನ್ ನಲ್ಲಿ ಡಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್, ಯು ಪಿ ಐ ಮೂಲಕ ಪಾವತಿಸಬಹುದು.
ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕಗಳು
| ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ | 18 ಜೂನ್ 2026 |
| ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 08 ಜುಲೈ 2026 |
| ಪ್ರಿಲಿಮಿನರಿ ಪರೀಕ್ಷಾ ದಿನಾಂಕ | ಆಗಷ್ಟ್ – 2026 |
| ಮುಖ್ಯ ಪರೀಕೆ ದಿನಾಂಕ | ಸೆಪ್ಟೆಂಬರ್ 2026 |
| ಸೈಕೋಮೆಟ್ರಿಕ್ ಟೆಸ್ಟ್ ದಿನಾಂಕ | ಅಕ್ಟೋಬರ್ / ನವೆಂಬರ್ 2026 |
| ಸಂದರ್ಶನ & ಗ್ರೂಪ್ ಎಕ್ಸರ್ಸೈಜ್ ದಿನಾಂಕ | ಅಕ್ಟೋಬರ್ / ನವೆಂಬರ್ 2026 |
SBI Probationary Officer Recruitment 2026
ಪ್ರಮುಖ ಲಿಂಕ್ ಗಳು:
| NOTIFICATION | CLICK HERE |
| APPLY ONLINE | CLICK HERE |
| Telegram Join Link | CLICK HERE |
| WhatsApp Group Link | CLICK HERE |