Vijayapur City Corporation Recruitment 2026: ನಿಮಗೆ ಬರೀ ಕನ್ನಡ ಮಾತನಾಡಲು ಬಂದರೆ ಸಾಕು ಮಹಾನಗರ ಪಾಲಿಕೆಯಲ್ಲಿ ಕೆಲಸ ಅವಕಾಶ, ಕೂಡಲೆ ಅರ್ಜಿ ಸಲ್ಲಿಸಿ./ Vijayapur City Corporation Recruitment 2026
Vijayapur City Corporation Recruitment 2026: ಉದ್ಯೋಗಕ್ಕಾಗಿ ಅರಸುತ್ತಿರುವ ನಿರುದ್ಯೋಗಿ ಅಭ್ಯರ್ಥಿಗಳಿಗೆ ಒಂದು ಸಿಹಿ ಸುದ್ದಿ, ನಿಮಗೆ ಓದಲು ಬರೆಯಲು ಬಾರದಿದ್ದರೂ ಬರಿ ಕನ್ನಡವನ್ನು ಮಾತನಾಡಲು ಬಂದರೆ ಸಾಕು ನಿಮಗೆ ಉದ್ಯೋಗ ಸಿಗುವ ಅವಕಾಶ ಇಲ್ಲಿದೆ. ಉದ್ಯೋಗದ ಹೆಸರು, ಹುದ್ದೆಗಳ ಸಂಖ್ಯೆ, ನೇಮಕಾತಿ ವಿದಾನ, ಉದ್ಯೋಗ ಸ್ಥಳ, ವೇತನ ಮತ್ತು ಇತರೆ ಷರತ್ತುಗಳ ಕುರಿತು ಮಾಹಿತಿಯನ್ನು ಈ ಕೆಳಗೆ ಬರೆದಿರುವ ಲೇಖನದಲ್ಲಿ ನೋಡೋಣ ಬನ್ನಿ.
ವಿಜಯಪುರ ಮಹಾನಗರ ಪಾಲಿಕೆ ಮತ್ತು ಅದರ ವ್ಯಾಪ್ತಿಯಲ್ಲಿ ಬರುವ ನಗರಸಭೆಗಳಲ್ಲಿ ಖಾಲಿ ಇರುವ ಪೌರಕಾರ್ಮಿಕ ಹುದ್ದೆಗಳಿಗೆ ಪೌರಸೇವಾ ವೃಂದ ಮತ್ತು ನೇಮಕಾತಿ ನಿಯಮ-2010 ಮತ್ತು ಮಹಾನಗರ ಪಾಲಿಕೆಗಳ ವೃಂದ & ನೇಮಕಾತಿ ನಿಯಮ -2011ರ ಪ್ರಕಾರ ಶೇ 50% ರಷ್ಟು ನೇರ ನೇಮಕಾತಿ ಮತ್ತು ಶೇ 50% ಪೌರಕಾರ್ಮಿಕರನ್ನು ನೇರ ಪಾವತಿ ಮೂಲಕ ನೇಮಕಾತಿ ಮಾಡಿಕೊಳ್ಳಲು ಅವಕಾಶ ಆದಾರದ ಮೇಲೆ ನೇರ ಪಾವತಿಯಡಿ ನೇಮಕಾತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿ ಸಾರ್ವಜನಿಕ ಪ್ರಕಟನೆ ಹೊರಡಿಸಿದೆ.
Vijayapur City Corporation Recruitment 2026:
ಉದ್ಯೋಗ ವಿವರ
| ನೇಮಕಾತಿ ಸಂಸ್ಥೆ: | ವಿಜಯಪುರ ಮಹಾನಗರ ಪಾಲಿಕೆ |
| ಹುದ್ದೆಗಳ ಹೆಸರು: | ಪೌರಕಾರ್ಮಿಕ |
| ಹುದ್ದೆಗಳ ಸಂಖ್ಯೆ: | 118 |
| ಉದ್ಯೋಗ ಸ್ಥಳ: | ವಿಜಯಪುರ |
| ಅರ್ಜಿ ಸಲ್ಲಿಸುವ ಬಗೆ: | ಆಪ್ ಲೈನ್ |
| ಆಯ್ಕೆ ಮಾಡುವ ವಿಧಾನ: | ನೇರ ನೇಮಕಾತಿ |
| ಅರ್ಜಿ ಸಲ್ಲಿಸುವ ದಿನಾಂಕ ಆರಂಭ: | 10.06.2026 |
| ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : | 15.07.2026 |
| ಅರ್ಜಿ ಶುಲ್ಕ ಭರಿಸುವ ಕೊನೆಯ ದಿನಾಂಕ: | 15.07.2026 |
| ಅರ್ಜಿ ಶುಲ್ಕ: | 100/- |
ಇದನ್ನು ಓದಿ: ವಿದ್ಯಾರ್ಥಿಗಳಿಗೆ ಸಿಹಿಸುದ್ದಿ! SG Jindal Foundation Scholarship 2026: ಯಾರು ಅರ್ಜಿ ಸಲ್ಲಿಸಬಹುದು? ಸಂಪೂರ್ಣ ಮಾಹಿತಿ
ಹುದ್ದೆಗಳ ವಿವರ:
ವಿಜಯಪುರ ಮಹಾನಗರ ಪಾಲಿಕೆ ಮತ್ತು ಅದರ ವ್ಯಾಪ್ತಿಯಲ್ಲಿರುವ ನಗರ ಸಭೆಗಳಲ್ಲಿ ಪೌರಕಾರ್ಮಿಕ ಹುದ್ದೆಗಳು ಖಾಲಿ ಇರುತ್ತವೆ.
ವಿದ್ಯಾರ್ಹತೆ ಮತ್ತು ಷರತ್ತುಗಳು :
- ಭಾರತೀಯ ನಾಗರೀಕನಾಗಿರತಕ್ಕದ್ದು.
- ಶೈಕ್ಷಣಿಕ ಅರ್ಹತೆ ಅನ್ವಯಿಸುವುದಿಲ್ಲ.
- ಕನ್ನಡ ಮಾತನಾಡಲು ಗೊತ್ತಿರಬೇಕು.
- ಮಿಸಲಾತಿ ಅನ್ವಯಿಸುವುದಿಲ್ಲ.
- ಈ ಹಿಂದೆ ಮಹಾನಗರ ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವಾಗ ಕೋವಿಡ್ – 19ರ ಸಾಂಕ್ರಾಮಿಕ ರೋಗಕ್ಕೆ ತುತ್ತಾಗೆ ಅಥವಾ ಇತರೆ ಕಾರಣಗಳಿಂದ ಮರಣ ಹೊಂದಿದ ಪೌರಕಾರ್ಮಿಕ ಕುಟುಂಬದ ಒಬ್ಬ ಸದಸ್ಯರಿಗೆ ಆದ್ಯತೆ ನೀಡಲಾಗುತ್ತದೆ.
- ಮಹಾನಗರ ಪಾಲಿಕೆಯಲ್ಲಿ ಕನಿಷ್ಠ 01 ವರ್ಷಕ್ಕಿಂತ ಕಡಿಮೆಯಿಲ್ಲದೇ ನಿರಂತರವಾಗಿ ಕೆಲಸ ನಿರ್ವಹಿಸುತ್ತಿರುವ & ಈ ನಿಯಮಗಳ ಪ್ರಾರಂಭದ ದಿನಾಂಕದಿಂದಲೂ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೆ ಆದ್ಯತೆ ನೀಡಲಾಗುತ್ತದೆ.
- ಪಾಲಿಕೆಯಲ್ಲಿ ತ್ಯಾಜ್ಯ ಸಂಸ್ಕರಣ ಘಟಕ. ಸಾರ್ವಜನಿಕ ಶೌಚಾಲಯ, ಶೂನ್ಯ ತ್ಯಾಜ್ಯ ನಿರ್ವಹಣೆ ಘಟಕದಲ್ಲಿ ಕಾರ್ಯನಿರ್ವಹಿಸಿ ಅನುಭವವುಳ್ಳ ಸ್ಥಳೀಯ ಸ್ವಚ್ಛತಾ ಕೆಲಸಗಾರರು ಅರ್ಜಿ ಸಲ್ಲಿಸಬಹುದು.
- ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ Manual Scavengers ಗುರುತಿಸಲ್ಪಟ್ಟ ಸಂತ್ರಸ್ಥರುಗಳಿಗೆ ಅಥವಾ ಅವರ ಕುಟುಂಬದ ಒಬ್ಬ ಸದಸ್ಯರಿಗೆ ಆದ್ಯತೆ ನೀಡಲಾಗುವುದು.
- ಈಗಾಗಲೇ ಯಾವುದೇ ಕಚೇರಿಯಲ್ಲಿ ಶಿಸ್ತು ಕ್ರಮಕ್ಕೆ ಒಳಗಾಗಿ ಸೇವೆಯಿಂದ ವಜಾಗೊಂಡಿರಬಾರದು.
- ಯಾವುದೇ ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾಗಿರಬಾರದು.
ವಯೋಮಿತಿ & ವಯೋಮಿತಿ ಸಡಿಲಿಕೆ:
ಖಾಲಿ ಇರುವ ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ವಯಸ್ಸು ನೇಮಕಾತಿ ಪ್ರಕಟನೆ ಹೋರಡಿಸಿದ ದಿನಾಂಕಕ್ಕೆ ಕನಿಷ್ಟ 18 ರಿಂದ ಗರಿಷ್ಟ 50 ವರ್ಷಗಳನ್ನು ಮೀರಿರಬಾರದು.
ವೇತನ ಶ್ರೇಣಿ:
ಪ್ರಸ್ತುತ ಕಾರ್ಮಿಕ ಇಲಾಖೆಯಿಂದ ನಿಗದಿಪಡಿಸಿದ ಕನಿಷ್ಠ ಚಾಲ್ತಿ ವೇತನ ನೀಡಲಾಗುತ್ತದೆ.
ಅರ್ಜಿ ಶುಲ್ಕ: ಅರ್ಜಿ ಸಲ್ಲಿಸುವ ಪ್ರತಿ ಅಭ್ಯರ್ಥಿಯು ಮಹಾನಗರ ಪಾಲಿಕೆಯಲ್ಲಿ 100/-ಗಳನ್ನು ಅರ್ಜಿ ಶುಲ್ಕವಾಗಿ ಭರಿಸಿ , ರಶೀದಿ ಪಡೆಯಬೇಕು.
ಲಗತ್ತಿಸಬೇಕಾದ ದಾಖಲೆಗಳು:
- ಆಧಾರ ಕಾರ್ಡ ಅಥವಾ ಇತರೆ ವಾಸಸ್ಥಳ ದಾಖಲೆಗಳು
- ಜನ್ಮ ದಿನಾಂಕ ಸಾಭೀತುಪಡಿಸುವ ಅಧಿಕೃತ ದಾಖಲೆಗಳು
- ಮೇಲಿನ ಹುದ್ದೆಗಳಲ್ಲಿ ಕೆಲಸ ನಿರ್ವಹಿಸಿದ ಬಗ್ಗೆ ವೇತನ, ESI, EPF ಗಳ ಬ್ಯಾಂಕ್ ಸ್ಟೇಟಮೆಂಟ್/ಹಾಜರಾತಿ ಪತ್ರಗಳು ಲಗತ್ತಿಸುವುದು.
- ಸಕ್ಷಮ ಪ್ರಾಧಿಕಾರದಿಂದ ಪಡೆದ ಸೇವಾ ಪ್ರಮಾಣ ಪತ್ರ ಲಗತ್ತಿಸುವುದು
Vijayapur City Corporation Recruitment 2026:
ಅರ್ಜಿ ಸಲ್ಲಿಸುವ ವಿಧಾನ:
ನೇಮಕಾತಿ ವಿಧಾನ:
- ವಿಜಯಪುರ ಮಹಾನಗರ ಪಾಲಿಕೆಯಲ್ಲಿ ಈ ಹಿಂದೆ ಕನಿಷ್ಟ ಒಂದು ವರ್ಷ ಪೌರ ಕಾರ್ಮಿಕ, ಲೋಡರ್ಸ, ಯುಜಿಡಿ ಸಹಾಯಕ, ಸ್ವಚ್ಛತಾಗಾರ ಮತ್ತು ಸಹಾಯಕರಾಗಿ ಹೊರಗುತ್ತಿಗೆ/ಗುತ್ತಿಗೆ/ದಿನಗೂಲಿ ಆದಾರದ ಮೇಲೆ ಕಾರ್ಯ ನಿರ್ವಹಿಸಿದ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ.
- ಒಟ್ಟು ಖಾಲಿ ಇರುವ ಹುದ್ದೆಗಳ ಪೈಕಿ ಶೇಕಡಾ 10 ರಷ್ಟು ಹುದ್ದೆಗಳನ್ನು ಮಹಾನಗರ ಪಾಲಿಕ ವ್ಯಾಪ್ತಿಯಲ್ಲಿ ಮ್ಯಾನುವಲ್ ಸ್ಕ್ಯಾವೆಂಜರ್ ಅಧಿನಿಯಮದಡಿ ಗುರುತಿಸಲ್ಪಟ್ಟ ಸಂತ್ರಸ್ಥರಿಗೆ ಅಥವಾ ಅವರ ಕುಟುಂಬದ ಒಬ್ಬ ಸದಸ್ಯರಿಗೆ(ಗಂಡ/ಹೆಂಡತಿ/ಮಗ/ಮಗಳು) ಮಿಸಲಿಡಲಾಗಿದೆ.
- ಕಡಿಮೆ ವರ್ಷ ಸೇವೆ ಸಲ್ಲಿಸಿರುವುದಕ್ಕಿಂತ ಹೆಚ್ಚು ವರ್ಷ ಸೇವೆ ಸಲ್ಲಿಸಿದವರನ್ನು ಆದ್ಯತೆ ಮೇರೆಗೆ ಪರಿಗಣಿಸಲಾಗುವುದು.
- ಸದರಿ ನೇರಪಾವತಿ ಪೌರಕಾರ್ಮಿಕರ ಹುದ್ದೆಗಳ ನೇಮಕಾತಿಯು ಸರ್ಕಾರ ಮತ್ತು ಪೌರಾಡಳಿತ ನಿರ್ದೇಶನಾಲಯದಿಂದ ಕಾಲಕಾಲಕ್ಕೆ ಹೊರಡಿಸಲಾಗುವ ಸುತ್ತೋಲೆಗಳು. ಆದೇಶಗಳು ಮತ್ತು ನಿರ್ದೇಶನಗಳ ಷರತ್ತುಗಳಿಗೆ ಒಳಪಟ್ಟಿರುತ್ತದೆ.
- ಈ ಸಾರ್ವಜನಿಕ ಪ್ರಕಟಣೆ ಪ್ರಕಟಗೊಂಡ ಪ್ರಾರಂಭದ ದಿನಾಂಕಕ್ಕೆ ಮುಂಚೆ ಮಹಾನಗರ ಪಾಲಿಕೆಯಲ್ಲಿ ಈ ಹಿಂದೆ ಹೊರಗುತ್ತಿಗೆ/ದಿನಗೂಲಿ/ಗುತ್ತಿಗೆ ಆಧಾರದ ಮೇಲೆ ಕನಿಷ್ಠ ಒಂದು ವರ್ಷ ಪೌರಕಾರ್ಮಿಕ, ಲೋಡರ್ನ್, ಯುಜಿಡಿ ಹೆಲ್ಸರ್ಸ್, ಕ್ಲೀನರ್ಸ್ ಹಾಗೂ ಹೆಲ್ಪರ್ಸ್‌ಗಳಾಗಿ ಕಾರ್ಯನಿರ್ವಹಿಸುತ್ತಿರುವ/ಕಾರ್ಯನಿರ್ವಹಿಸಿದ ಪ್ರಥಮ ಆದ್ಯತೆ ನೀಡಲಾಗುವುದು. ಅಭ್ಯರ್ಥಿಗಳಿಗೆ
- ಪಾಲಿಕೆಯಲ್ಲಿ ಹೊರಗುತ್ತಿಗೆ/ದಿನಗೂಲಿ/ಗುತ್ತಿಗೆ ಆಧಾರದ ಮೇಲೆ ಪೌರಕಾರ್ಮಿಕರಾಗಿ ಕಾರ್ಯ ನಿರ್ವಹಿಸುವಾಗ ಕೋವಿಡ್-19ರ ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿ ಅಥವಾ ಇತರೆ ಕಾರಣಗಳಿಂದ ಮರಣ ಹೊಂದಿದ ಪೌರಕಾರ್ಮಿಕರ ಕುಟುಂಬದ ಒಬ್ಬ ಸದಸ್ಯರಿಗೆ ಆದ್ಯತೆ ನೀಡಲಾಗುವುದು.
- ಇಬ್ಬರು ಮತ್ತು ಹೆಚ್ಚಿನ ಅಭ್ಯರ್ಥಿಗಳ ಸೇವಾ ಅವಧಿಯು ಸಮನಾಗಿದ್ದಲ್ಲಿ. ಅಂತಹ ಸಂದರ್ಭದಲ್ಲಿ ಅಭ್ಯರ್ಥಿಗಳ ಅದ್ಯತಾ ಕ್ರಮವನ್ನು ವಯಸ್ಸಿನ ಆಧಾರದ ಮೇಲೆ ನಿಗದಿಪಡಿಸಲಾಗುವುದು, ಜನ್ಮ ದಿನಾಂಕ ಮತ್ತು ಸೇವೆಯ ದಿನಾಂಕ ಒಂದೇ ಆಗಿದ್ದಲ್ಲಿ ಲಾಟರಿ ಮೂಲಕ ಆಯ್ಕೆ ಮಾಡಲಾಗುವುದು.
- ನೇರ ಪಾವತಿಯಡಿ ಆಯ್ಕೆಗೊಂಡ ಅಭ್ಯರ್ಥಿಗೆ ಕಾರ್ಮಿಕ ಇಲಾಖೆಯು ಕಾಲ-ಕಾಲಕ್ಕೆ ಪರಿಷ್ಕರಿಸುವ ಕನಿಷ್ಠ ವೇತನವನ್ನು ಮತ್ತು PF. ESI ಸೌಲಭ್ಯ ಕಲ್ಪಿಸಲಾಗುವುದು.
ಪ್ರಮುಖ ದಿನಾಂಕಗಳು:
| ಅರ್ಜಿ ಸಲ್ಲಿಸುವ ದಿನಾಂಕ ಆರಂಭ: | 10.06.2026 |
| ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : | 15.07.2026 |
| ಅರ್ಜಿ ಶುಲ್ಕ ಭರಿಸುವ ಕೊನೆಯ ದಿನಾಂಕ: | 15.07.2026 |
ಕಛೇರಿ ವೆಬ್ ಸೈಟ್
ಅಧಿಸೂಚನೆಯನ್ನು ಮಹಾನಗರ ಪಾಲಿಕೆಯ www.vijayapuracity.mrc.gov.in ಅಥವಾ ಫಲಕದಲ್ಲಿ ಹಾಗೂ ಜಿಲ್ಲಾ ನಗರಾಭಿವೃದ್ಧಿ ಕೋಶದ ವೆಬ್‌ಸೈಟ್ ಸೂಚನಾ www.vijayapuradudc.mrc.gov.in ಅರ್ಜಿ ನಮೂನೆಗಾಗಿ ವಿಜಯಪುರ ಮಹಾನಗರ ಪಾಲಿಕೆಯ ಕೇಂದ್ರ ಕಚೇರಿ ವೇಳೆಯಲ್ಲಿ ಸಂಪರ್ಕಿಸುವುದು.