Telegram Join My Telegram WhatsApp Join My WhatsApp

ಸರ್ಕಾರದಿಂದ ಮಹಿಳಾ ಸ್ವ ಸಹಾಯ ಸಂಘಗಳಿಗೆ ಭರ್ಜರಿ ಗಿಪ್ಟ್, 7 ರಿಂದ 15 ಲಕ್ಷದ ವರೆಗೆ ಸಹಾಯಧನ, ಇಲ್ಲಿದೆ ಸಂಪೂರ್ಣ ಮಾಹಿತಿ, NRLM Rural Women Entrepreneurship – Akka Cafe

ಸರ್ಕಾರದಿಂದ ಮಹಿಳಾ ಸ್ವ ಸಹಾಯ ಸಂಘಗಳಿಗೆ ಭರ್ಜರಿ ಗಿಪ್ಟ್, 7 ರಿಂದ 15 ಲಕ್ಷದ ವರೆಗೆ ಸಹಾಯಧನ, ಇಲ್ಲಿದೆ ಸಂಪೂರ್ಣ ಮಾಹಿತಿ, NRLM Rural Women Entrepreneurship – Akka Cafe

NRLM Rural Women Entrepreneurship – Akka Café: ಗ್ರಾಮೀಣ ಭಾಗದ ಸ್ವಯಂ ಉದ್ಯೋಗ ಮಾಡಲು ಆಸಕ್ತಿ ಇರುವ ಮಹಿಳೆಯರಿಗೆ ಒಂದು ಸುವರ್ಣಾವಕಾಶವನ್ನು ರಾಜ್ಯ ಸರಕಾರ ವತಿಯಿಂದ ರಾಜ್ಯದಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಡಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆಯಡಿ 50 ಕಫೆ ಸಂಜೀವಿನಿ (ಅಕ್ಕ ಕೆಫೆ) ಕ್ಯಾಂಟೀನ್‌ಗಳನ್ನು ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ.

ಎನಿದು NRLM ಯೋಜನೆ? NRLM Rural Women Entrepreneurship – Akka Café: 

ರಾಷ್ಟ್ರೀಯ ಜೀವನೋಪಾಯ ಅಭಿಯಾನದ ಉದ್ದೇಶ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಬಡತನದ ಪ್ರಮಾಣವನ್ನು ಕಡಿಮೆ ಮಾಡುವುದಾಗಿರುತ್ತದೆ. ಈ ನಿಟ್ಟಿನಲ್ಲಿ ಅಭಿಯಾನದಡಿ ಮಹಿಳೆಯರನ್ನು ಸ್ವಸಹಾಯ ಗುಂಪುಗಳಡಿ ಸಂಘಟಿಸಿ, ಅವರಿಗೆ ಕೃಷಿ ಮತ್ತು ಕೃಷಿಯೇತರ ವಿಭಾಗಗಳಡಿ ವಿವಿಧ ಜೀವನೋಪಾಯ ಚಟುವಟಿಕೆಗಳನ್ನು ಒದಗಿಸುವುದರ ಜೊತೆಗೆ ಅವರು, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯವಾಗಿ ಅಭಿವೃದ್ಧಿ ಪಥದೊಂದಿಗೆ ಸ್ವಾವಲಂಬನೆಯ ಜೀವನವನ್ನು ನಿರ್ವಹಿಸುವಲ್ಲಿ ನಿರಂತರ ಬೆಂಬಲ ನೀಡಲಾಗುತ್ತಿದೆ. ಪ್ರಮುಖವಾಗಿ ಮಹಿಳೆಯರು ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಂಡು ಜೀವನೋಪಾಯದೊಂದಿಗೆ ಸಬಲೀಕರಣದ ಬದುಕನ್ನು ರೂಪಿಸಿಕೊಳ್ಳುವಲ್ಲಿ ಅವಶ್ಯಕ ಸಾಮರ್ಥ್ಯಾಭಿವೃದ್ಧಿ ತರಬೇತಿಗಳನ್ನು ಏರ್ಪಡಿಸಿ, ಪ್ರತಿಯೊಬ್ಬ ಮಹಿಳೆಯನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಸೂಕ್ತ ಅವಕಾಶಗಳನ್ನು ಕಲ್ಪಿಸಿ ನಿರಂತರ ಶ್ರಮಿಸಲಾಗುತ್ತಿದೆ.

 ಎನಿದು ಅಕ್ಕ ಕೆಫೆ ಕಾರ್ಯಕ್ರಮ? NRLM Rural Women Entrepreneurship – Akka Café: 

ಈ ಹಿನ್ನಲೆಯಲ್ಲಿ “ಅಕ್ಕ ಕೆಫೆ” ಕಾರ್ಯಕ್ರಮದ ಮುಖ್ಯ ಉದ್ದೇಶವು ಮಹಿಳಾ ಸ್ವ-ಸಹಾಯ ಸಂಘಗಳಿಗೆ ಆಹಾರ ಪೂರೈಕೆ ಕ್ಷೇತ್ರದಲ್ಲಿ ಸುಸ್ಥಿರ ಜೀವನೋಪಾಯ ಚಟುವಟಿಕೆಯನ್ನು ಒದಗಿಸುವುದಾಗಿರುತ್ತದೆ ಪ್ರಮುಖವಾಗಿ ಈ ಅಕ್ಕ ಕೆಫೆ ಚಟುವಟಿಕೆಯಡಿ ಉತ್ತಮ ಗುಣಮಟ್ಟದ ಶುಚಿ-ರುಚಿ ಪೌಷ್ಠಿಕ ಆಹಾರವನ್ನು ಸಾರ್ವಜನಿಕರಿಗೆ ಕೈಗೆಟುಕುವ ದರದಲ್ಲಿ ಪೂರೈಸುವ ದೂರದೃಷ್ಟಿಯೊಂದಿಗೆ ರಾಜ್ಯಾದ್ಯಂತ ಒಂದೇ ಮಾದರಿಯ ಕೆಫೆಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ. ಸಮುದಾಯ ಆಧಾರಿತ ಉತ್ತಮ ಆಹಾರ ಸೇವಾ ಉದ್ಯಮವಾಗಿ ಅಭಿವೃದ್ಧಿಪಡಿಸುವ ಮೂಲಕ ಕರ್ನಾಟಕ ರಾಜ್ಯಾದ್ಯಂತ ಮಹಿಳೆಯರಿಂದಲೇ ನಿರ್ವಹಿಸಲ್ಪಡುವ ಆಹಾರ ಸೇವಾ ಉದ್ಯಮಗಳನ್ನು ಬೆಳೆಸುವುದು.

ಇದನ್ನು ಓದಿ: ನಿಮಗೆ ಬರೀ ಕನ್ನಡ ಮಾತನಾಡಲು ಬಂದರೆ ಸಾಕು ಮಹಾನಗರ ಪಾಲಿಕೆಯಲ್ಲಿ ಕೆಲಸ ಅವಕಾಶ, ಕೂಡಲೆ ಅರ್ಜಿ ಸಲ್ಲಿಸಿ./ Vijayapur City Corporation Recruitment 2026

ಕಾರ್ಯಕ್ರಮದ ಪ್ರಯೋಜನ ಪಡೆಯುವುದು ಹೇಗೆ?

ಇದು ಮಹಿಳೆಯರಿಂದ ಕೂಡಿದ ಮಹಿಳಾ ಸ್ವ ಸಹಾಯ ಗುಂಪುಗಳಿಗೆ ನೀಡಲಾಗುವ ಅವಕಾಶವಾಗಿದೆ. ಆದ್ದರಿಂದ ಈ ಅಕ್ಕ ಕೆಫೆ ನಿರ್ವಹಿಸಲು  ಮಹಿಳಾ ಸ್ವ-ಸಹಾಯ ಗುಂಪುಗಳ ಆಯ್ಕೆ  ಈ ಕೆಳಗಿನಂತಿದೆ

  • ಸಂಜೀವಿನಿ – NRLM ಯೋಜನೆಯಡಿ ಮಹಿಳಾ ಸ್ವ ಸಹಾಯ ಗುಂಪು ರಚನೆಯಾಗಿರಬೇಕು.
  • ಸ್ವ-ಸಹಾಯ ಗುಂಪಿನಲ್ಲಿ ಕನಿಷ್ಠ 5 ರಿಂದ ಗರಿಷ್ಠ 10 ಮಹಿಳೆಯರಿರುವ ಸ್ವ-ಸಹಾಯ ಗುಂಪನ್ನು ಆಯ್ಕೆ ಮಾಡಲಾಗುವುದು.
  • ಪಾಕ ಪರಿಣಿತಿಯಲ್ಲಿ ಆಸಕ್ತಿವುಳ್ಳವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.
  • ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟಗಳು/ ಪ್ರದೇಶ ಮಟ್ಟದ ಒಕ್ಕೂಟಗಳಡಿ ಅರ್ಹ ಮತ್ತು ಬಂಡವಾಳವನ್ನು ಹೂಡುವ ಸ್ವ-ಸಹಾಯ ಗುಂಪಗಳಿಗೆ ಆದ್ಯತೆ ನೀಡಲಾಗುತ್ತದೆ.
  • ಯಾವುದೇ ಒಕ್ಕೂಟ/ ಹಣಕಾಸು ಸಂಸ್ಥೆಯ ಸಾಲ ಬಾಕಿದಾರರಾಗಿರಬಾರದು.
  • ರಾಜ್ಯ/ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ತರಬೇತಿ ಮತ್ತು ಕಾರ್ಯಾಗಾರಗಳಲ್ಲಿ ಭಾಗವಹಿಸಲು ಸಿದ್ಧರಿರಬೇಕು.

ಅನುದಾನ ಹಂಚಿಕೆ ಮತ್ತು ಬಳಕೆ

NRLM Rural Women Entrepreneurship – Akka Café: 

ಅಕ್ಕ ಕೆಫೆ ವಿವಿಧ ಪ್ರಕಾರದ ಅಳತೆಯ ಆಧಾರದಡಿ ಮೂಲ ಸೌಕರ್ಯಗಳನ್ನು ಕಲ್ಪಿಸಲು ಅನುದಾನವನ್ನು ಸ್ವ ಸಹಾಯ ಗುಂಪುಗಳಿಗೆ ನೀಡಲಾಗುತ್ತದೆ.

ಪ್ರಕಾರ ಅಳತೆ  ಅನುದಾನ
ಕಿರು ಅಕ್ಕ ಕಫ (ಕ್ಲಾಸಿಕ್) ಕನಿಷ್ಠ 400 ರಿಂದ 500 ಚದರಡಿ ರೂ. 7.00 ಲಕ್ಷಗಳು
ರೆಸ್ಟೋರೆಂಟ್ (ಪ್ರೀಮಿಯಂ) ಕನಿಷ್ಠ 501 ರಿಂದ 800 ಚದರಡಿ ರೂ.15.00 ಲಕ್ಷಗಳು

ಅಕ್ಕ ಕಫೆ ಉದ್ಯಮವನ್ನು ಉನ್ನತ ಮಟ್ಟದಲ್ಲಿ ಸ್ಥಾಪಿಸಲು ಹೆಚ್ಚುವರಿ ಅನುದಾನದ ಅವಶ್ಯಕತೆ ಕಂಡುಬಂದಲ್ಲಿ ಚಟುವಟಿಕೆಗೆ ಆಯ್ಕೆಯಾಗಿರುವ ಮಹಿಳೆಯರಿಗೆ ಸಮುದಾಯ ಬಂಡವಾಳ ನಿಧಿ, ಬ್ಯಾಂಕ್ ಲಿಂಕೇಜ್, ಎಸ್.ವಿ.ಇ.ಪಿ ಹಾಗೂ ಓ.ಎಸ್.ಎಫ್‌, ಪಿಎಂಎಪ್‌ಎಂಇ ಚಟುವಟಿಕೆಗಳಡಿ ಅನುದಾನ ಒದಗಿಸುವುದು. ಮುಂದುವರೆದು, ಇತರೇ ಸಹ ಇಲಾಖೆಗಳ ಒಗ್ಗೂಡಿಸುವಿಕೆ ಕಾರ್ಯಕ್ರಮಗಳು ಅಥವಾ ಸಂಸದರಿಂದ ಅನುದಾನ ಮತ್ತು ಸಿ.ಎಸ್.ಆರ್ ಅನುದಾನವನ್ನು ಪಡೆಯಬಹುದಾಗಿರುತ್ತದೆ.

 ಸ್ವ ಸಹಾಯ ಸಂಘವು ಮಾಡಿಕೊಳ್ಳುವ ಒಡಂಬಡಿಕೆಗಳು (MoU)

  • ಅಕ್ಕ ಕಫೆ ಸ್ಥಾಪನೆಗೆ ಆಯ್ಕೆಯಾಗುವ ಸ್ಥಳದ ಒಡೆತನ ಹೊಂದಿರುವ ಇಲಾಖೆ ಮತ್ತು ಜಿಲ್ಲಾ ಪಂಚಾಯತಿ/ನಗರ ಸ್ಥಳೀಯ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳುವುದು.
  • ಅಕ್ಕ ಕಫೆ ನಿರ್ವಹಿಸಲು ಆಯ್ಕೆಯಾಗುವ ಗ್ರಾಮ/ನಗರ ಮಟ್ಟದ ಒಕ್ಕೂಟ/ಸ್ವಸಹಾಯ ಗುಂಪು ಮತ್ತು ತಾಲ್ಲೂಕು ಪಂಚಾಯತಿ/ನಗರ ಸಭೆ/ಪುರಸಭೆ/ಪಟ್ಟಣ ಪಂಚಾಯತಿಗಳೊಂದಿಗೆ ಒಪ್ಪಂದ.

ಸ್ವ ಸಹಾಯ ಸಂಘದ ಆಯ್ಕೆ ಮತ್ತು ಮೇಲ್ವಿಚಾರಣೆ:

ಜಿಲ್ಲಾ ಮಟ್ಟದ ಸಮಿತಿಯ ರಚನೆ:

NRLM Rural Women Entrepreneurship – Akka Café: 

ಕ್ರ.ಸಂ ಹುದ್ದೆ ಪದನಾಮ
1 ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತಿ ಅಧ್ಯಕ್ಷರು
2 ಆಯುಕ್ತರು, ಮಹಾನಗರ ಪಾಲಿಕೆ ಸದಸ್ಯರು
3 ಜಂಟಿ ಆಯುಕ್ತರು, ಬಿಬಿಎಂಪಿ ಸಂಬಂಧಪಟ್ಟ ವಲಯಗಳು, (ಬಿಬಿಎಂಪಿ ವ್ಯಾಪ್ತಿಗಳಲ್ಲಿ) ಸದಸ್ಯರು
4 ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ, ಜಿಲ್ಲಾ ಕೌಶಲ್ಯ ಮಿಷನ್ ಸದಸ್ಯರು
5 ಜಿಲ್ಲಾ ಆಹಾರ ಸುರಕ್ಷಣಾ ಅಧಿಕಾರಿಗಳು ಸದಸ್ಯರು
6 ಒಬ್ಬರು ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಗಳು ಸದಸ್ಯರು
7 ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರು ಗ್ರಾಮೀಣ & ನಗರ ಸದಸ್ಯರು
8 ಒಬ್ಬರು ತಾಲ್ಲೂಕು ಮಟ್ಟದ ಒಕ್ಕೂಟದ ಸದಸ್ಯರು ಸದಸ್ಯರು
9 ಒಬ್ಬರು ಗ್ರಾಮ ಪಂಚಾಯತಿ ಮತ್ತು ಒಬ್ಬರು ನಗರ ಮಟ್ಟದ ಒಕ್ಕೂಟದ ಅಧ್ಯಕ್ಷರು ಸದಸ್ಯರು
10 ಒಬ್ಬರು ಅಕ್ಕ ಕಫ ನಿರ್ವಹಣೆಯ ಮಹಿಳಾ ಸದಸ್ಯರು ಸದಸ್ಯರು
11 ಯೋಜನಾ ನಿರ್ದೇಶಕರು, ಜಿಲ್ಲಾ ಪಂಚಾಯತ್ ಸಂಚಾಲಕರು

ಅಕ್ಕ ಕೆಫೆ ಗಳನ್ನು ಅನುಷ್ಠಾನಗೊಳಿಸಲು ಕ್ರಮವಹಿಸುವುದು. ಈ ಚಟುವಟಿಕೆಯ ನಿರಂತರ ಪ್ರಗತಿಯ ಮೇಲ್ವಿಚಾರಣೆ ಮತ್ತು ಮೌಲ್ಯ ಮಾಪನವನ್ನು ಕೈಗೊಳ್ಳುವಲ್ಲಿ ಅನುಕೂಲವಾಗುವ ದೃಷ್ಠಿಯಿಂದ ಜಿಲ್ಲಾ ಹಂತದಲ್ಲಿ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ಈ ಮೇಲಿನ ಸಮಿತಿಯನ್ನು ರಚಿಸಿ ಪ್ರತಿ 3 ತಿಂಗಳಿಗೊಮ್ಮೆ ತಪ್ಪದೆ ಸಭೆ ನಡೆಸುವುದು. ಸಮಿತಿಯಲ್ಲಿ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲಾಗುತ್ತಿರುವ ಅಕ್ಕ ಕಥೆಯ ಪ್ರಗತಿ ಹಾಗೂ ಯಾವುದಾದರು ಸಮಸ್ಯೆಗಳು/ಸವಾಲುಗಳು ಮುಂತಾದ ವಿಷಯಗಳ ಬಗ್ಗೆ ಚರ್ಚಿಸಿ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತದೆ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಅಕ್ಕ ಕಫೆಯ ಕುರಿತಾದ ಚಟುವಟಿಕೆಗಳ ಯಶಸ್ವಿ ಅನುಷ್ಠಾನಗೊಳಿಸುವ ಉದ್ದೇಶದಿಂದ ಇತರ ಇಲಾಖೆ ಅಥವಾ ವ್ಯಕ್ತಿಗಳನ್ನು ಈ ಮೇಲಿನ ಸಮಿತಿಗೆ ಸೇರಿಸಿಕೊಳ್ಳುವ ಅಧಿಕಾರವನ್ನು ಹೊಂದಿರುತ್ತಾರೆ.

ಇದನ್ನು ಓದಿ: ವಿದ್ಯಾರ್ಥಿಗಳಿಗೆ ಸಿಹಿಸುದ್ದಿ! SG Jindal Foundation Scholarship 2026: ಯಾರು ಅರ್ಜಿ ಸಲ್ಲಿಸಬಹುದು? ಸಂಪೂರ್ಣ ಮಾಹಿತಿ

 ಅಕ್ಕ ಕೆಫೆ ನಿರ್ವಹಿಸುವಲ್ಲಿ ಸ್ವ ಸಹಾಯ ಸಂಘದ ಜವಾಬ್ದಾರಿಗಳು

NRLM Rural Women Entrepreneurship – Akka Café:

ನೈರ್ಮಲ್ಯ ಮತ್ತು ಶುಚಿತ್ವ :

  • ಅಕ್ಕ ಕಥೆಯಲ್ಲಿನ ಅಡುಗೆ ಸಿಬ್ಬಂದಿಗಳು ಆಹಾರ ತಯಾರಿಸುವ ಮೊದಲು ಮತ್ತು ತಯಾರಿಸಿದ ನಂತರ ಹಾಗೂ ಇತರೆ ಯಾವುದೇ ಚಟುವಟಿಕೆಗಳನ್ನು ಕೈಗೊಂಡ ನಂತರ ಕೈಗಳನ್ನು ಸಾಬೂನಿನಿಂದ ಸ್ವಚ್ಛವಾಗಿ ತೊಳೆದುಕೊಳ್ಳುವ ಪದ್ಧತಿ ಅನುಸರಿಸುವುದು.
  • ಆಹಾರವನ್ನು ತಯಾರಿಸುವ ಮೊದಲು ಎಲ್ಲಾ ಸಿಬ್ಬಂದಿಗಳು ನಿಗದಿಪಡಿಸಲಾಗಿರುವ ಸಮವಸ್ತ್ರ ಗಳಾದ ಹೇರ್ ನೆಟ್ (Hair Net) ಅಥವಾ ಕ್ಯಾವ್ (Caps)ಗಳು, ಏಪ್ರಾನ್ (Aprons)ಗಳು ಮತ್ತು ಕೋಸ್ಟ್ ಶೂಸ್ (Closed-toe-shoes) ಮುಂತಾದ ಉಡುಪುಗಳನ್ನು ಕಡ್ಡಾಯವಾಗಿ ಧರಿಸುವುದು ಹಾಗೂ ಸ್ವಚ್ಛವಾಗಿಟ್ಟುಕೊಳ್ಳುವುದು.

ಕೆಫೆಯ ಮತ್ತು ಸಲಕರಣೆಗಳ ಸ್ವಚ್ಛತೆ ನಿರ್ವಹಣೆ :

  • ಅಕ, ಕಫೆಯನ್ನು ನಿರ್ವಹಿಸುವವರು ಪ್ರತಿ ದಿನ ಉತ್ತಮ ರಾಸಾಯನಿಕಗಳನ್ನು (Soaps, Floor Cleanings) ಬಳಸಿ ಸ್ವಚ್ಛಗೊಳಿಸುವುದು. ಪ್ರತಿ ದಿನ ಬಾಗಿಲು, ಕಿಡಕಿಯ ಹಿಡಿಕೆಗಳು, Light Switches ಮತ್ತು Billing ಯಂತ್ರಗಳು ಹಾಗೂ ಹೆಚ್ಚು ಬಳಕೆ ಮಾಡುವ ಇತರೇ ವಸ್ತುಗಳ ಮೇಲೆಗಳನ್ನು ಶುಚಿಗೊಳಿಸುವುದು.
  • ಅವಶ್ಯಕತೆಗೆ ಅನುಗುಣವಾಗಿ ಶೌಚಾಲಯಗಳು, ಸಿಂಕ್‌ಗಳು, ಮತ್ತು ಕನ್ನಡಿಗಳನ್ನು ಒಳಗೊಂಡಂತೆ ವಿಶ್ರಾಂತಿ ಕೊಠಡಿ (Rest Rooms) ಶುಚಿಗೊಳಿಸಿ ನಿರಂತರ ಸ್ವಚ್ಛತೆಗೆ ಗಮನವಹಿಸುವುದು.
  • ಕಸ ಮತ್ತು ತ್ಯಾಜ್ಯ ಸಂಗ್ರಹಣೆ ತಡೆಯುವಲ್ಲಿ ಅಡುಗೆ ಮನೆಯ ಗೋಡೆಗಳು ಮತ್ತು ಛಾವಣಿಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸುವುದು. ಸರಿಯಾದ ಒಳಚರಂಡಿ ವ್ಯವಸ್ಥೆಯ ನಿರ್ವಹಣೆ ಮತ್ತು ಸ್ವಚ್ಛತೆಗೆ ಗಮನ ಹರಿಸುವುದು. ಸಲಕರಣೆಗಳ ಅತ್ಯುತ್ತಮ ಸ್ಥಿತಿಯನ್ನು ಕಾಪಾಡಿಕೊಳ್ಳಲು ಅಗತ್ಯವಿರುವ ವ್ಯತ್ತಿಪರ ಸೇವೆ ಮತ್ತು ದುರಸ್ಥಿ ವ್ಯವಸ್ಥೆಗಳನ್ನು ಕೈಗೊಳ್ಳುವುದು.

ಪಾಕೋಪಕರಣಗಳ ಸ್ವಚ್ಛತೆ ನಿರ್ವಹಣೆ :

ಪ್ರತಿ ಬಳಕೆಯ ಮೊದಲು ಮತ್ತು ನಂತರ ಆಹಾರ ತಯಾರಿಕೆಯ ಪಾತ್ರೆಗಳನ್ನು ಮತ್ತು ಮೇಲ್ಕೆಗಳನ್ನು ಸ್ವಚ್ಛಗೊಳಿಸುವುದು. ತರಬೇತಿ ಸಮಯದಲ್ಲಿ ತಿಳಿಸಿದಂತೆ ಹಾಗೂ ಮುಖ್ಯ ತರಬೇತುದಾರರು ಸ್ಥಳ ಭೇಟಿ ನೀಡಿ ಪರಿಶೀಲಿಸಿ ತಿಳಿಸುವ ಅಂಶಗಳಂತೆ ನಿರಂತರ ಸ್ವಚ್ಛತೆಗೆ ಆದ್ಯತೆ ನೀಡುವುದು.

ಆಹಾರ ನಿರ್ವಹಣೆ, ತಯಾರಿ ಮತ್ತು ಸ್ವಚ್ಛಗೊಳಿಸುವಿಕೆ :

ಅಡುಗೆ ತಯಾರಿಸುವ ಮೊದಲು ಸಂಗ್ರಹಿಸುವ ಎಲ್ಲಾ ಪದಾರ್ಥಗಳು ತಾಜಾ ಹಾಗೂ ಆಹಾರ ಸುರಕ್ಷತೆ ಇರುವ ಬಗ್ಗೆ, ಪರೀಶೀಲಿಸಿ ಖಾತ್ರಿ ಪಡಿಸಿಕೊಳ್ಳಬೇಕು. ರೆಫ್ರಿಜಿರೇಟರ್, ಮೈಕ್ರೋವೇವ್ ನಲ್ಲಿ ಇಡಲಾದ ಆಹಾರ ಪದಾರ್ಥಗಳನ್ನು ಬಾಹ್ಯ ಉಷ್ಣಾಂಶದಲ್ಲಿ ಹೆಚ್ಚು ಸಮಯ ಇಡದಂತೆ ಕ್ರಮವಹಿಸುವುದು.

ಆಹಾರ ತಯಾರಿಕ ಪಟ್ಟಿ :

ಅಧಿಕೃತ ಸ್ಥಳೀಯ ಬೇಡಿಕೆಯ ಆಹಾರಗಳು ಮತ್ತು ರುಚಿಗನುಗುಣವಾಗಿ ಆಹಾರ ತಯಾರಿಕ ಪಟ್ಟಿಯನ್ನು ಸಿದ್ಧಪಡಿಸುವುದು ಹಾಗೂ ಫಲಕದಲ್ಲಿ ಪ್ರದರ್ಶಿಸುವುದು. ತಾಜಾತನದ ಖಚಿತತೆ ಹಾಗೂ ಹಾಳಾಗದಂತೆ ತಡೆಯಲು ದಾಸ್ತಾನುಗಳನ್ನು ನಿಯಮಿತವಾಗಿ ವರಿಶೀಲಿಸುವುದು. ದಾಸ್ತಾನು ನಿರ್ವಹಣೆಗೆ ಅನುಕೂಲವಾಗುವಂತೆ ಮತ್ತು ತ್ಯಾಜ್ಯಗಳನ್ನು ತಡೆಗಟ್ಟಲು ಶೇಖರಣಾ ಪ್ರದೇಶಗಳನ್ನು ವ್ಯವಸ್ಥಿತವಾಗಿ ಸ್ವಚ್ಛವಾಗಿಡುವುದು. ಅವಧಿ ಮೀರಿದ ಅಥವಾ ಹಾಳಾದ ವಸ್ತುಗಳನ್ನು ತ್ವರಿತವಾಗಿ ಮತ್ತು ನಿಯಮಾನುಸಾರ ವಿಲೇವಾರಿ ಮಾಡುವುದು.

ಆಹಾರ ಸುರಕ್ಷತೆ ಮತ್ತು ನೈರ್ಮಲ್ಯ:

ಆಹಾರ ಪದಾರ್ಥಗಳ ಶೇಖರಣಾ ಪ್ರದೇಶಗಳ ಸ್ವಚ್ಛತೆ, ಗಾಳಿ ಮತ್ತು ಕೀಟಗಳಿಂದ ಮುಕ್ತವಾಗಿವೆ ಎಂದು ಖಚಿತಪಡಿಸಿಕೊಳ್ಳುವುದು. ಆಹಾರ ತಯಾರಿಸಲು ಬಳಸುವ ಪದಾರ್ಥಗಳು ಮತ್ತು ಸಿದ್ಧಪಡಿಸಿದ ಆಹಾರಗಳು ಕಲುಷಿತವಾಗದಂತೆ ಮತ್ತು ವ್ಯರ್ಥವಾಗದಂತೆ ಸರಿಯಾದ ಶುಚಿತ್ರ ಅಭ್ಯಾಸಗಳನ್ನು ನಿರಂತರವಾಗಿ ನಿರ್ವಹಿಸುವುದು.

ಹಣಕಾಸು ಮತ್ತು ಬಿಲ್ಲಿಂಗ್ :

ಅಕ್ಕ ಕಥೆಯಲ್ಲಿ ಒಬ್ಬ ಸಿಬ್ಬಂದಿಗೆ ನಗದು ನಿರ್ವಹಣೆಯ ಬಗ್ಗೆ, ಜವಾಬ್ದಾರಿ ನೀಡುವುದು ಹಾಗೂ ತಿಂಗಳ ಅವಧಿಯ ಆಧಾರದಲ್ಲಿ ಪ್ರತಿಯೊಬ್ಬರು ಸದರಿ ಕಾರ್ಯವನ್ನು ನಿರ್ವಹಿಸುವುದು. ದಿನನಿತ್ಯದ ಎಲ್ಲಾ ವ್ಯಾಪಾರ ವಹಿವಾಟುಗಳನ್ನು ಬಿಲ್ಲಿಂಗ್‌ ಮೆಷಿನ್‌ನಲ್ಲಿ ದಾಖಲಿಸುವುದು. ಪ್ರತಿ ವಹಿವಾಟನ್ನು ಸರಿಯಾಗಿ ವರ್ಗೀಕರಿಸಲಾಗಿದೆ ಎಂಬುದರ ಬಗ್ಗೆ ಖಾತರಿ ಪಡಿಸಿಕೊಳ್ಳುವುದು. (ಉದಾ: ಅಹಾರ, ಪಾನೀಯಗಳು). ಸರ್ಕಾರದ ಯಾವುದೇ ಕಛೇರಿಯಲ್ಲಿ ಆಯೋಜಿಸಲಾಗುವ ಯಾವುದೇ ಅಧಿಕೃತ ಸಭೆ. ಸಮಾರಂಭ, ಕಾರ್ಯಾಗಾರ ಇತ್ಯಾದಿಗಳನ್ನು ನಿಗದಿ ಪಡಿಸಲಾದ ದರಗಳಂತೆ ಸರಬರಾಜು ಮಾಡುವುದರೊಂದಿಗೆ ಅಧಿಕೃತ ಬಿಲ್ಲುಗಳನ್ನು ಪಡೆಯುವುದು. ಅಕ್ಕ ಕೆಫೆ  ಖಾಸಗಿ ಸ್ಥಳದಲ್ಲಿ ಸ್ಥಾಪಿಸಿದ್ದಲ್ಲಿ ಸದರಿ ಕಥೆಯನ್ನು ನಿರ್ವಹಿಸುವ ಸ್ಮ-ಸಹಾಯ ಗುಂಪುಗಳು/ ಒಕ್ಕೂಟಗಳು ಬಾಡಿಗೆಯನ್ನು ಸ್ವತಃ ಪಾವತಿಸುವುದು.

ಬ್ಯಾಂಕ್ ಖಾತೆ ನಿರ್ವಹಣೆ:

ಅಕ್ಕ ಕಥೆಯ ಪ್ರತಿ ದಿನದ ವ್ಯವಹಾರಗಳನ್ನು ನಿರ್ವಹಿಸಲು ಅನುಕೂಲವಾಗುವ ದೃಷ್ಟಿಯಿಂದ ಮತ್ತು ಡಿಜಿಟಲ್ ಪಾವತಿಗಳ ವ್ಯವಸ್ಥೆಗೆ ಅನುಕೂಲ ಒದಗಿಸುವಲ್ಲಿ ಈ ಚಟುವಟಿಕೆಗೆ ಆಯ್ಕೆಯಾಗಿರುವ ಮಹಿಳೆಯರ ಹೆಸರಿನಲ್ಲಿ ಜಂಟಿ Current Bank Account ಅನ್ನು ತೆರೆಯುವುದು.

 ತೆರಿಗೆ ಮತ್ತು ಫೈಲಿಂಗ್:

ಅಕ್ಕ, ಕೆಫೆ ನಿರ್ವಹಣೆಯ ಸ್ವ-ಸಹಾಯ ಗುಂಪು/ಒಕ್ಕೂಟಗಳು ಆರ್ಥಿಕ ವಹಿವಾಟುಗಳಿಗೆ ಅನುಗುಣವಾಗಿ ಸರ್ಕಾರದ ನಿಯಮಾವಳಿಗಳಂತೆ ತೆರಿಗೆಗಳನ್ನು ಪಾವತಿಸುವುದು. ಈ ಚಟುವಟಿಕೆಗೆ ಸಂಬಂಧಪಟ್ಟ ದಾಖಲೆಗಳ ನಿರ್ವಹಣೆ ಮತ್ತು ಇತರೇ ಪೂರಕ ಅಂಶಗಳ ದಾಖಲೀಕರಣ ಮತ್ತು ವರದಿ ನಿರ್ವಹಣೆಗಾಗಿ ವೃತ್ತಿಪರ ಆದಾಯ ತೆರಿಗೆದಾರರ/ಸಲಹೆಗಾರರ ಸೇವೆಯನ್ನು ಪಡೆದು ಪ್ರತಿ ವರ್ಷ ತಪ್ಪದೇ ನಿಗದಿತ ದಿನಾಂಕದೊಳಗಾಗಿ ಆದಾಯ ತೆರಿಗೆ ವರದಿಯನ್ನು ತಪ್ಪದೇ ಸಲ್ಲಿಸುವುದು

ಕಫೆಯಲ್ಲಿ ರಾಸಾಯನಿಕವಾಗಿ (ಉದಾಹರಣೆ: ಕೋಣೆ, ಪಾತ್ರ ಉಪಕರಣಗಳನ್ನು) ಸ್ವಚ್ಛಗೊಳಿಸಲು ಬಳಸಿದ ಪದಾರ್ಥಗಳು ಅಥವಾ ಅವಧಿ ಮೀರಿದ ಆಹಾರ ವದಾರ್ಥಗಳನ್ನು ಗುರುತಿಸಿ ಪ್ರತ್ಯೇಕವಾಗಿ ಸರಿಯಾಗಿ ಲೇಬಲ್ ಮಾಡಿ ತ್ಯಾಜ್ಯಗಳನ್ನು ವಿಲೇವಾರಿ

ಅಕ್ಕ ಕೆಫೆಯಲ್ಲಿ ನಿರ್ವಹಿಸಬೇಕಾದ ದಾಖಲೆಗಳು

  • ಹಾಜರಾತಿ ಪುಸ್ತಕ.
  • ಆಹಾರ ಪದಾರ್ಥಗಳ ಖರೀದಿ, ದಾಸ್ತಾನು ಮತ್ತು ಬಳಕೆ ವಿವರ.
  • ದೈನಂದಿನ ಲೆಕ್ಕ ಪತ್ರಗಳ ನಿರ್ವಹಣೆ ಪುಸ್ತಕ.
  • ಸಂದರ್ಶಕರ ಪುಸ್ತಕ.
  • ಖರೀದಿ ಆದೇಶಗಳು, ಇನ್‌ವಾಯ್ಸ್, ಇತರೆ ಎಲ್ಲಾ ಪಾವತಿಗಳು.
  • ಅವಶ್ಯಕ ಎಲ್ಲಾ ಸನ್ನದುಗಳು (Licence).

ಯಾರನ್ನು ಸಂಪರ್ಕಿಸಬೇಕು?

NRLM Rural Women Entrepreneurship – Akka Café: 

ರಾಜ್ಯ ಎಲ್ಲಾ ಜಿಲ್ಲಾ ಪಂಚಾಯತಗಳಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆಯನ್ನು ನಿರ್ವಹಿಸುತ್ತಿರುವ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರನ್ನು ಸಂಪರ್ಕಿಸಿ ಮಾಹಿತಿಯನ್ನು ಪಡೆಯಬಹುದಾಗಿದೆ.

ಈ ರೀತಿ ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಬೆಂಬಲಿಸಿ

Teligram Group – ಕ್ಲಿಕ್‌ ಮಾಡಿ

Watsapp Group – ಕ್ಲಿಕ್‌ ಮಾಡಿ

 

 

Leave a Comment