Telegram Join My Telegram WhatsApp Join My WhatsApp

VAO Recruitment 2026: 572 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿ| PUC ಪಾಸ್ ಅಭ್ಯರ್ಥಿಗಳಿಗೆ ಅವಕಾಶ

VAO Recruitment 2026: ಕರ್ನಾಟಕದಲ್ಲಿ 572 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿ – PUC ಪಾಸ್ ಅಭ್ಯರ್ಥಿಗಳಿಗೆ ಸರ್ಕಾರಿ ಉದ್ಯೋಗದ ಭರ್ಜರಿ ಅವಕಾಶ! 

VAO Recruitment 2026: ಸರಕಾರಿ ಉದ್ಯೋಗದ ಕನಸು ಕಾಣುತ್ತಿರುವ ಕರ್ನಾಟಕದ ಯುವಕ ಯುವತಿಯರಿಗೆ ಭರ್ಜರಿ ಸುವರ್ಣ ಅವಕಾಶ ದೊರೆತಿದೆ. ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯ ವಿವಿಧ ಜಿಲ್ಲೆಗಳಲ್ಲಿ ಖಾಲಿ ಇರುವ 572 ಗ್ರಾಮ ಆಡಳಿತ ಅಧಿಕಾರಿ (Village Administration officer- VAO) ಹುದ್ದೆಗಳ ಭರ್ತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(Karntatak Examination Authority) ಅಧಿಕೃತ ಅಧಿಸೂಚನೆ ಪ್ರಕಟಿಸಿದೆ. ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ, 11 ಜುಲೈ 2026 ರಿಂದ 30 ಜುಲೈ 2026 ವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

VAO Recruitment 2026 ಪ್ರಮುಖ ಅಂಶಗಳು 

ವಿವರ ಮಾಹಿತಿ
ನೇಮಕಾತಿ ಸಂಸ್ಥೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA)
ಇಲಾಖೆ ಕಂದಾಯ ಇಲಾಖೆ
ಹುದ್ದೆಗಳ ಹೆಸರು ಗ್ರಾಮ ಆಡಳಿತ ಅಧಿಕಾರಿ(Village Administration Officer)
ಒಟ್ಟು ಹುದ್ದೆಗಳು 572
ಉದ್ಯೋಗ ಸ್ಥಳ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ
ಅರ್ಜಿ ಸಲ್ಲಿಸುವ ವಿಧಾನ ಆನ್ಲೈನ್
ಅರ್ಜಿ ಆರಂಭ 11 ಜುಲೈ 2026
ಅರ್ಜಿ ಕೊನೆಯ ದಿನಾಂಕ 30 ಜುಲೈ 2026
ವೇತನ ರೂ.34,100 ರಿಂದ 67,600 ರವರೆಗೆ
ಅರ್ಜಿ ಸಲ್ಲಿಸುವ ಲಿಂಕ್‌ ಈ ಲೇಖನದ ಕೊನೆಯಲ್ಲಿದೆ.

ಇದನ್ನು ಓದಿ: KSRLPS Recruitment Notification 2026: ಬೆಳಗಾವಿ ಜಿಲ್ಲಾ ಪಂಚಾಯತ ಭರ್ಜರಿ ನೇಮಕಾತಿ, ಕೂಡಲೆ ಅರ್ಜಿ ಸಲ್ಲಿಸಿ.

ಜಿಲ್ಲಾವಾರು ಹುದ್ದೆಗಳ ವಿವರ / District Wise Vacancy

572 ಹುದ್ದೆಗಳು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭರ್ತಿಯಾಗಲಿವೆ ಪ್ರಮುಖ ಜಿಲ್ಲೆಗಳು:

ಕಲ್ಯಾಣ ಕರ್ನಾಟಕ ಹುದ್ದೆಗಳು
ಕಲಬುರಗಿ 40
ಬೀದರ್‌ 17
ರಾಯಚೂರು 10
ಒಟ್ಟೂ ಹುದ್ದೆಗಳು  67
ಉಳಿಕೆ ವೃಂದದಲ್ಲಿ ಹುದ್ದೆಗಳು
ಬೆಂಗಳೂರು ನಗರ 20
ಬೆಂಗಳೂರು ಗ್ರಾಮಾಂತರ 29
ಚಿತ್ರದುರ್ಗ 15
ಚಿಕ್ಕಬಳ್ಳಾಪುರ 21
ತುಮಕೂರು 50
ಶಿವಮೊಗ್ಗ 18
ಕೋಲಾರ 22
ಬೆಂಗಳೂರು ದಕ್ಷಿಣ 30
ಮೈಸೂರು 45
ಮಂಡ್ಯ 50
ಹಾಸನ 35
ಉಡುಪಿ 10
ದಕ್ಷಿಣ ಕನ್ನಡ 20
ಚಾಮರಾಜನಗರ 31
ಚಿಕ್ಕಮಗಳೂರು 10
ಬೆಳಗಾವಿ 48
ಬಾಗಲಕೋಟೆ 16
ಗದಗ 14
ಹಾವೇರಿ 15

ಬೀದರ್‌

04
ರಾಯಚೂರು 02
ಒಟ್ಟೂ ಹುದ್ದೆಗಳ ಸಂಖ್ಯೆ  505
ಒಟ್ಟೂ ಹುದ್ದೆಗಳ ಸಂಖ್ಯೆ  572

ಅಭ್ಯರ್ಥಿಗಳು ಒಂದು ಜಿಲ್ಲೆಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ.

ವಿದ್ಯಾರ್ಹತೆ: Qualification 

  • VAO Recruitment 2026 ಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಈ ಕೆಳಗಿನ ಅರ್ಹತೆ ಹೊಂದಿರಬೇಕು.
  • PUC ಅಥವಾ ತತ್ಸಮಾನ ವಿದ್ಯಾರ್ಹತೆ
  • CBSE/ICSE 12 ನೇ ತರಗತಿ
  • PUC ಅಥವಾ JOC ಅಂಕಗಳನ್ನು ಪರಿಗಣಿಸದೇ ಕೇವಲ ಸ್ಪರ್ಧಾತ್ಮಕ ಪರೀಕ್ಷೆ ಅಂಕಗಳ ಆಧಾರದ ಮೇಲೆ ಹುದ್ದೆಗಳನ್ನು ಆಯ್ಕೆ ಮಾಡುವುದಾದರೆ  JOC ಯನ್ನು PUC ಗೆ ತತ್ಸಮಾನವೆಂದು ಕನಿಷ್ಟ ಶೈಕ್ಷಣಿಕ ಅರ್ಹತೆಯಾಗಿ ಪರಿಗಣಿಸಲಾಗುತ್ತದೆ.

ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಕನಿಷ್ಟ ಕಡ್ಡಾಯವಾಗಿ  ವಿದ್ಯಾರ್ಹತೆಯನ್ನು ಹೊಂದಿರಬೇಕು.

VAO Recruitment 2026 – ವಯೋಮಿತಿ: 

ಅಭ್ಯರ್ಥಿಗಳು ಕನಿಷ್ಠ 18 ವರ್ಷ ವಯಸ್ಸನ್ನು ಕಡ್ಡಾಯವಾಗಿ ಹೊಂದಿರಬೇಕು.

ವರ್ಗ ಗರಿಷ್ಠ ವಯೋಮಿತಿ
ಸಾಮಾನ್ಯ ಅಭ್ಯರ್ಥಿಗಳಿಗೆ 40 ವರ್ಷಗಳು
ಪ್ರವರ್ಗ 2A 2B 3A ಮತ್ತು 3B ಅಭ್ಯರ್ಥಿಗಳಿಗೆ  43 ವರ್ಷಗಳು
ಪರಿಶೀಷ್ಟ ಜಾತಿ/ಪರಿಶೀಷ್ಠ ಪಂಗಡ/ಪ್ರ ವರ್ಗ-1 ಅಭ್ಯರ್ಥಿಗಳಿಗೆ  45 ವರ್ಷಗಳು

ವಯೋಮಿತಿ ಸಡಿಲಿಕೆ : Age Relaxation

  • ಮಾಜಿ ಸೈನಿಕರಿಗೆ                             3 ವರ್ಷಗಳು
  • ವಿಶೇಷ ಚೇತನ ಅಭ್ಯರ್ಥಿಗಳಿಗೆ        10 ವರ್ಷಗಳು
  • ವಿಧವೆಯಾಗಿದ್ದಲ್ಲಿ                         10 ವರ್ಷಗಳು

ಸರ್ಕಾರದ ನಿಯಮಾನುಸಾರ ಇತರೆ ವರ್ಗಗಳಿಗೆ ವಯೋಮಿತಿ ಸಡಿಲಿಕೆ ಅನ್ವಯವಾಗುತ್ತದೆ.

VAO Recruitment 2026 – ಮೀಸಲಾತಿ: Reservation

  • ಜಾತಿ ಮೀಸಲಾತಿ
  • ಮಾಜಿ ಸೈನಿಕ
  • ಗ್ರಾಮೀಣ ಅಭ್ಯರ್ಥೀ
  • ಕನ್ನಡ ಮಾಧ್ಯಮ ಅಭ್ಯರ್ಥಿ
  • ಯೋಜನಾ ನಿರಾಶ್ರಿತ
  • ವಿಶೇಷ ಚೇತನ ಅಭ್ಯರ್ಥಿಗಳು
  • ತೃತಿಯ ಲಿಂಗದ ಅಭ್ಯರ್ಥಿಗಳೂ

VAO Recruitment 2026 – ವೇತನ ಎಷ್ಟು Salary : 

  • ಖಾಯಂಪೂರ್ವ ಅವಧಿ: ಆಯ್ಕೆಗೊಂಡ ಅಭ್ಯರ್ಥಿಗಳು 2 ವರ್ಷಗಳ ಕಾಲ ಖಾಯಂಪೂರ್ವ ಅವಧಿಯಲ್ಲಿರುತ್ತಾರೆ.
  • ವೇತನ ಶ್ರೇಣಿ:  ಆಯ್ಕೆಯಾದ ಅಭ್ಯರ್ಥಿಗಳಿಗೆ ರೂಪಾಯಿ 34,100 ರಿಂದ 67600 ರೂಗಳವರೆಗೆ ವೇತನ ಶ್ರೇಣಿ ದೊರೆಯಲಿದೆ ಇತರೊಂದಿಗೆ ಸರ್ಕಾರದ ನಿಯಮಾನಸಾರ ಬತ್ತೆಗಳು ಹಾಗೂ ರಾಷ್ಟ್ರೀಯ ಪಿಂಚಣಿ ಯೋಜನೆಯ ಸೌಲಭ್ಯವು ಲಭ್ಯವಾಗಲಿದೆ.

ಅರ್ಜಿ ಶುಲ್ಕ: Application Fees

ಸಾಮಾನ್ಯ ಅರ್ಹತೆ ಮತ್ತು ಇತರೆ ಪ್ರವರ್ಗಗಳು (ಪ್ರವರ್ಗ-2ಎ/2ಬಿ/3ಎ/3ಬಿ) ಅಭ್ಯರ್ಥಿಗಳು ರೂ.750
ಪರಿಶೀಷ್ಟ ಜಾತಿ / ಪರಿಶಿಷ್ಟ ಪಂಗಡ/ ಪ್ರವರ್ಗ-1/ಮಾಜಿ ಸೈನಿಕ/ ತೃತೀಯ ಲಿಂಗದ ಅಭ್ಯರ್ಥಿಗಳು ರೂ. 500
ವಿಶೇಷ ಚೇತನ ಅಭ್ಯರ್ಥಿಗಳಿಗೆ ರೂ. 250

ಸೂಚನೆ: ಶುಲ್ಕ ಪಾವತಿಸುವ ಮೊದಲು ಅಗತ್ಯವಿರುವ ಶೈಕ್ಷಣಿಕ ಅರ್ಹತೆ, ಮೀಸಲಾತಿ, ವಯೋಮಿತಿ ಹಾಗೂ ಇತರೆ ಎಲ್ಲ ಅರ್ಹತಾ ಷರತ್ತುಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿಕೊಂಡು ಅರ್ಜಿ ಸಲ್ಲಿಸಿ, ಶುಲ್ಕವನ್ನು ಪಾವತಿಸುವುದು.

ಆಯ್ಕೆ ಪ್ರಕ್ರಿಯೆ Selection Process

ಅಭ್ಯರ್ಥಿಗಳ ಆಯ್ಕೆ ಕೆಳಗಿನ ಹಂತದಲ್ಲಿ ನಡೆಯುತ್ತದೆ

  • ಕಡ್ಡಾಯ ಕನ್ನಡ ಭಾಷಾ ಪತ್ರಿಕೆ
  • ಸ್ಪರ್ಧಾತ್ಮಕ ಪರೀಕ್ಷೆ
  • ದಾಖಲೆಗಳ ಪರಿಶೀಲನೆ
  • ಅಂತಿಮ ಆಯ್ಕೆ ಪಟ್ಟಿ

VAO Recruitment 2026 – ಪರೀಕ್ಷಾ ದಿನಾಂಕ:

ಕನ್ನಡ ಭಾಷಾ ಪರೀಕ್ಷೆ ಪರೀಕ್ಷೆ ದಿನಾಂಕವನ್ನು ನಂತರ ತಿಳಿಸಲಾಗುವುದು
ಪತ್ರಿಕೆ-1   ದಿನಾಂಕ: 04/10/2026 – ಬೆಳಿಗ್ಗೆ 10.30 ರಿಂದ 12.30 ರವರೆಗೆ
ಪತ್ರಿಕೆ-2    ದಿನಾಂಕ: 04/10/2026 – ಬೆಳಿಗ್ಗೆ 2.30 ರಿಂದ 4.30 ರವರೆಗೆ

ಪರೀಕ್ಷಾ ವಿಧಾನ: Examination

ಸ್ಪರ್ಧಾತ್ಮಕ ಪರೀಕ್ಷೆಯನ್ನು ಆಪ್‌ ಲೈನ್‌ ಓಎಂಆರ್ ಮಾದರಿಯಲ್ಲಿ ನಡೆಸಲಾಗುವುದು. ಪರೀಕ್ಷಾ ಕೇಂದ್ರಗಳ ಮಾಹಿತಿಯನ್ನು ಮತ್ತು ಪ್ರವೇಶ ಪತ್ರವನ್ನು ಪ್ರಾಧಿಕಾರದ ವೆಬ್‌ ಸೈಟ್‌ನಲ್ಲಿ ಪ್ರಕಟಿಸಲಾಗುವುದು. ಪರೀಕ್ಷೆಗೆ ಪ್ರವೇಶ ಪತ್ರದ ಜೊತೆಗೆ ಗುರುತಿನ ಚೀಟಿಯನ್ನು ತೆಗೆದುಕೊಂಡು ಬರುವುದು.

VAO Recruitment 2026 – ಪರೀಕ್ಷಾ ಪಠ್ಯಕ್ರಮ 

ಪತ್ರಿಕೆ ವಿಷಯ ಒಟ್ಟು ಪ್ರಶ್ನೆಗಳು ಗರಿಷ್ಟ ಅಂಕಗಳು ಅವಧಿ
ಪತ್ರಿಕೆ 1 ಪ್ರಚಲಿತ ಘಟನೆಗಳಿಗೆ ಸಂಬಂದಿಸಿದ ಸಾಮಾನ್ಯ ಜ್ಞಾನ ಪ್ರಚಲಿತ ವಿದ್ಯಮಾನ ದೈನಂದಿನ ಗ್ರಹಿಕೆಯ ವಿಷಯಗಳು  ಭಾರತ ಸಂವಿಧಾನ ಕರ್ನಾಟಕಕ್ಕೆ ಸಂಬಂದಿಸಿದ ಭಾರತದ ಇತಿಹಾಸ ಭಾರತದ ಭೂಗೋಳ ರಾಜ್ಯ ಮತ್ತು ಪ್ರಾದೇಶಿಕ ಆಡಳಿತ ಕುರಿತ ವಿಷಯಗಳು  ಪಂಚಾಯತ್ ರಾಜ್ ಗ್ರಾಮೀಣಾಭಿವೃದ್ಧಿ, ಗ್ರಾಮೀಣ ಸಹಕಾರ ಸಂಸ್ಥೆಗಳಿಗೆ ಸಂಭಂದಿಸಿದ ಉಪ ಕ್ರಮಗಳನ್ನು ಒಳಗೊಂಡಂತೆ ಕರ್ನಾಟಕ ಆರ್ಥಿಕತೆ ಅಭಿವೃದ್ಧಿ ಕುರಿತ ವಿಷಯಗಳು , ಕರ್ನಾಟಕದ ಪರಿಸರ ಸಂಬಂಧಿ ಸಮಸ್ಯೆಗಳು 100 100 2 ಗಂಟೆ
ಪತ್ರಿಕೆ 2 ಸಾಮಾನ್ಯ ಕನ್ನಡ ಸಾಮಾನ್ಯ ಇಂಗ್ಲಿಷ್ ಕಂಪ್ಯೂಟರ್ ಜ್ಞಾನ 100 100 2 ಗಂಟೆ

ಸೂಚನೆ: ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಅರ್ಹತೆಗಾಗಿ ಶೇ 35 ಗಳಿಸುವುದು ಕಡ್ಡಾಯವಾಗಿದೆ.

VAO Recruitment 2026 – ಅರ್ಜಿ ಸಲ್ಲಿಸುವ ವಿಧಾನ 

  • KEA ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ.
  •  VAO Recruitment 2026 ಲಿಂಕ್ ಆಯ್ಕೆ ಮಾಡಿ
  • ಹೊಸ ನೋಂದಣಿ ಮಾಡಿ
  • ಅರ್ಜಿ ನಮೂನೆಯನ್ನು ಭರ್ತಿ ಮಾಡಿ
  • ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ
  • ಅರ್ಜಿ ಶುಲ್ಕ ಪಾವತಿಸಿ

ಅರ್ಜಿಯನ್ನು ಅಂತಿಮವಾಗಿ ಸಲ್ಲಿಸಿ ಮತ್ತು ಪ್ರಿಂಟ್ ತೆಗೆದುಕೊಳ್ಳಿ

ಅಗತ್ಯ ದಾಖಲೆಗಳು Required Documents

  • ಆಧಾರ್ ಕಾರ್ಡ್
  • ಎಸ್ ಎಸ್ ಎಲ್ ಸಿ ಅಂಕಪಟ್ಟಿ
  • ಪಿಯುಸಿ ಅಂಕಪಟ್ಟಿ
  • ಜಾತಿ ಪ್ರಮಾಣ ಪತ್ರ (ಅಗತ್ಯವಿದ್ದಲ್ಲಿ)
  • ಗ್ರಾಮೀಣ ಮೀಸಲಾತಿ ಪ್ರಮಾಣ ಪತ್ರ
  • ಕನ್ನಡ ಮಾಧ್ಯಮ ಪ್ರಮಾಣ ಪತ್ರ
  • ಪಾಸ್ಪೋರ್ಟ್ ಗಾತ್ರದ ಭಾವಚಿತ್ರ ಸಹಿ

ವಿಶೇಷ ಸೂಚನೆಗಳು

  • ಅಭ್ಯರ್ಥಿಗಳು ಆನ್‌ ಲೈನ್‌ ಮೂಲಕ ಅರ್ಜಿ ಸಲ್ಲಿಸುವಾಗ ಎಲ್ಲಾ ಮಾಹಿತಿಗಳನ್ನು ಸರಿಯಾಗಿ ಭರ್ತಿ ಮಾಡಿರುವ ಬಗ್ಗೆ ಖಚಿತಪಡಿಸಿಕೊಂಡು ನಂತರ ಅದರ ಒಂದು ಪ್ರತಿಯನ್ನು ಡೌನ್ ಲೋಡ್‌ ಮಾಡಿಕೊಳ್ಳಬೇಕು. ಮತ್ತು ಶುಲ್ಕ ಪಾವತಿಯ ಚಲನ್‌ ಅನ್ನು ನೇಮಕಾತಿ ಪ್ರಕ್ರಿಯೆ ಮುಗಿಯುವವರೆಗೂ ಕಾಯ್ದಿಟ್ಟುಕೊಳ್ಳುವುದು.
  • ಅಭ್ಯರ್ಥಿಗಳು ಆನ್‌ ಲೈನ್‌ ಅರ್ಜಿಯನ್ನು ಭರ್ತಿ ಮಾಡುವ ಮೊದಲು ವೆಬ್‌ ಸೈಟ್‌ ನಲ್ಲಿ ನೀಡಿರುವ ವಿವರವಾದ ಪ್ರಕಟಣೆಯನ್ನು/ಸೂಚನೆಗಳನ್ನು/ವಿಧಾನವನ್ನು ತಿಳಿದುಕೊಳ್ಳುವುದು ಮತ್ತು ಅರ್ಜಿಯಲ್ಲಿ ಘೋಷಿಸಿರುವ ಮಾಹಿತಿಗಳು ಅಂತಿಮವಾಗಿದ್ದು, ಹೆಚ್ಚಿನ ಮಾಹಿತಿ/ದಾಖಲೆಗಳ ಸಲ್ಲಿಕೆಗೆ ಅವಕಾಶವಿರುವುದಿಲ್ಲ.
  • ಅಭ್ಯರ್ಥಿಯು ಅರ್ಜಿಯನ್ನು ಸಮರ್ಪಕವಾಗಿ ತುಂಬದೇ ಅರ್ಜಿಯು ತಿರಸ್ಕೃತವಾದಲ್ಲಿ ಅಥವಾ ಯಾವುದೇ ಸೌಲಭ್ಯದಿಂದ ಅವರು ವಂಚಿತರಾದಲ್ಲಿ ಅದಕ್ಕೆ ಅಭ್ಯರ್ಥಿಗಳೇ ನೇರ ಜವಾಬ್ದಾರರು.
  • ಆಯ್ಕೆಗೆ ಸಂಬಂದಿಸಿದಂತೆ ಅಭ್ಯರ್ಥಿಯು ಯಾವುದೇ ವಿಧವಾದ ಅಪಪ್ರಚಾರ ಮಾಡುವ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಲ್ಲಿ ಯಾವೂದೇ ಮೂನ್ಸೂಚನೆ ನೀಡದೇ ಅವರನ್ನು ಆಯ್ಕೆಗೆ ಅನರ್ಹಗೊಳಿಸಲಾಗುವುದು.
  • ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆಗಳು: ಮಾಹಿತಿ ಕೇಂದ್ರ – 080-23460460 ಬೆಳಿಗ್ಗೆ 10.00 ಗಂಟೆಯಿಂದ ಸಂಜೆ 6.00 ಗಂಟೆಯ ಒಳಗಾಗಿ ಸಂಪರ್ಕಿಸಬಹುದು.

ಪ್ರಮುಖ ದಿನಾಂಕಗಳು 

ಅಧಿಸೂಚನೆ ಪ್ರಕಟಣೆ 10 ಜುಲೈ 2026
ಅರ್ಜಿ ಸಲ್ಲಿಸಲು ಆರಂಭ ದಿನಾಂಕ    11 ಜುಲೈ 2026 
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ   31 ಜುಲೈ 2026 
ಪರೀಕ್ಷೆ ದಿನಾಂಕ(ಸ್ಪರ್ಧಾತ್ಮಕ ಪರೀಕ್ಷೆ)  04 ಅಕ್ಟೋಬರ್ 2026

VAO Recruitment 2026 ಯಾಕೆ ಉತ್ತಮ ಅವಕಾಶ? 

ಗ್ರಾಮರ್ ಆಡಳಿತ ಅಧಿಕಾರಿ ಹುದ್ದೆಯು ಕಂದಾಯ ಇಲಾಖೆಯ ಪ್ರಮುಖ ಹುದ್ದೆಗಳಲ್ಲಿ ಒಂದಾಗಿದೆ ಗ್ರಾಮ ಮಟ್ಟದಲ್ಲಿ ಆಡಳಿತಾತ್ಮಕ ಕಾರ್ಯ ಸಾರ್ವಜನಿಕ ಸೇವೆ ಭೂ ದಾಖಲೆ ನಿರ್ವಹಣೆ ಮತ್ತು ಸರ್ಕಾರದ ವಿವಿಧ ಯೋಜನೆಗಳ ಅನುಷ್ಠಾನದಲ್ಲಿ ಪ್ರಮುಖ ಪಾತ್ರ ವಹಿಸುವ ಅವಕಾಶ ಈ ಹುದ್ದೆಗಳಲ್ಲಿ ದೊರೆಯುತ್ತದೆ ಅವಕಾಶಗಳು ಈ ಉದ್ಯೋಗವನ್ನು ಇನ್ನಷ್ಟು ಆಕರ್ಷಕವನ್ನಾಗಿಸಿದೆ.

Frequently Asked Questions (FAQ)

1 VAO Recruitment 2026 ರಲ್ಲಿ ಎಷ್ಟು ಹುದ್ದೆಗಳಿವೆ

    500 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳು

2 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು

    31 ಜುಲೈ 2026

3 ಕನಿಷ್ಠ ವಿದ್ಯಾರ್ಥಿ ಏನು

    ಪಿಯುಸಿ ಅಥವಾ ಸರ್ಕಾರದಿಂದ ಮಾನ್ಯತೆ ಪಡೆದ ತತ್ಸಮಾನ ವಿದ್ಯಾರ್ಥಿ

4. ವೇತನ ಎಷ್ಟು

     ರೂಪಾಯಿ 34,100 ರಿಂದ 67600

5. ಆಯ್ಕೆ ಹೇಗೆ ನಡೆಯುತ್ತದೆ

    ಕನ್ನಡ ಭಾಷಾ ಪರೀಕ್ಷೆ ಅನ್ಯವಾದರೆ ಸ್ಪರ್ಧಾತ್ಮಕ ಪರೀಕ್ಷೆ ದಾಖಲಾ ಪರಿಶೀಲನೆ ಹಾಗೂ ಅಂತಿಮ ಆಯ್ಕೆ ಮೂಲಕ

ಪ್ರಮುಖ ಲಿಂಕ್‌ ಗಳು:

ಅಧಿಕೃತ ವೆಬ್‌ ಸೈಟ್‌ ಇಲ್ಲಿ ಕ್ಲಿಕ್‌ ಮಾಡಿ

ಅಧಿಕೃತ ಅಧಿಸೂಚನೆ (ಉಳಿದ ವೃಂದ)

ಇಲ್ಲಿ ಕ್ಲಿಕ್‌ ಮಾಡಿ
ಅಧಿಕೃತ ಅಧಿಸೂಚನೆ  (ಕಲ್ಯಾಣ ಕರ್ನಾಟಕ) ಇಲ್ಲಿ ಕ್ಲಿಕ್‌ ಮಾಡಿ
ಅರ್ಜಿ ಸಲ್ಲಿಸುವ ಲಿಂಕ್ ಇಲ್ಲಿ ಕ್ಲಿಕ್‌ ಮಾಡಿ
ವಾಟ್ಸ ಆಪ್‌ ಗ್ರುಪ್‌ ಲಿಂಕ್‌ ಇಲ್ಲಿ ಕ್ಲಿಕ್‌ ಮಾಡಿ
ಟೆಲಿಗ್ರಾಂ ಗ್ರುಪ್‌ ಲಿಂಕ್ ಇಲ್ಲಿ ಕ್ಲಿಕ್‌ ಮಾಡಿ

‌Disclaimer

ಈ ಲೇಖನದಲ್ಲಿರುವ ಮಾಹಿತಿಯನ್ನು ಅಧಿಕೃತ ಕರ್ನಾಟಕ ಪರಿಕ್ಷಾ ಪ್ರಾಧಿಕಾರ ವೆಬ್‌ ಸೈಟ್‌ ಅಧಿಸೂಚನೆಯ ಮೇಲೆ ಸಿದ್ದಪಡಿಸಲಾಗಿದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಕಡ್ಡಾಯವಾಗಿ ಓದಬೇಕು. ಅಧಿಕೃತ ವೆಬ್‌ ಸೈಟ್‌ ನಲ್ಲಿ ಪ್ರಕಟವಾಗುವ ಮಾಹಿತಿಯೇ ಅಂತಿಮವಾಗಿರುತ್ತದೆ.

Leave a Comment