Telegram Join My Telegram WhatsApp Join My WhatsApp

Government Job Notification : 1600 CAR/DAR ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್‌ ಹುದ್ದೆಗಳ ಭರ್ಜರಿ ನೇಮಕಾತಿ, ಅರ್ಜಿ ಆರಂಭ

Government Job Notification: 1600 CAR/DAR ಪೊಲೀಸ್‌ ಕಾನ್ಸ್‌ ಟೇಬಲ್‌ ಹುದ್ದೆಗಳ ಭರ್ಜರಿ ನೇಮಕಾತಿ, ಅರ್ಜಿ ಆರಂಭ

Government Job Notification :  ಸರ್ಕಾರಿ ಉದ್ಯೋಗಕ್ಕಾಗಿ ತಯಾರಿ ನಡೆಸುತ್ತಿರುವ ಯುವಕರಿಗೆ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಭರ್ಜರಿ ಉದ್ಯೋಗಾವಕಾಶ ಪ್ರಕಟವಾಗಿದೆ. ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ (KSP) ರಾಜ್ಯದ ವಿವಿಧ ಜಿಲ್ಲೆಗಳು, ನಗರಗಳು ಹಾಗೂ ಘಟಕಗಳಲ್ಲಿ ಖಾಲಿ ಇರುವ 1600  ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ (CAR/DAR) ಹುದ್ದೆಗಳ ನೇರ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆ  ಹೊರಡಿಸುವುದರ ಮೂಲಕ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಈ ಹುದ್ದೆಗಳಿಗ ನೇಮಕಾತಿ ಲಿಖಿತ ಪರೀಕ್ಷೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸಲಿದ್ದು, ಇದು ಸರ್ಕಾರಿ ಕನಸು ಕಾಣುತ್ತಿರುವ ಎಷ್ಟೋ ಅಭ್ಯರ್ಥಿಗಳಿಗೆ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಲು ತನ್ನ ಬಾಗಿಲನ್ನು ತೆರೆದಿದೆ. ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ವಿಧಾನ, ಶೈಕ್ಷಣಿಕ ಅರ್ಹತೆ, ಮಿಸಲಾತಿ, ಇತರೆ ವಿಷಯಗಳ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ.

ಇದನ್ನು ಓದಿ: ಎಸ್.ಬಿ.ಐ ಬ್ಯಾಂಕ್‌ ನಲ್ಲಿ ಭರ್ಜರಿ ನೇಮಕಾತಿ 2026 – SBI Probationary Officer Recruitment 2026 SBI Probationary Officer Recruitment 2026

ಉದ್ಯೋಗ ವಿವರ: Government Job Notification

ನೇಮಕಾತಿ ಇಲಾಖೆ:     ಕರ್ನಾಟಕ ರಾಜ್ಯ ಪೊಲೀಸ್‌ ಇಲಾಖೆ
ನೇಮಕಾತಿ ಸಂಸ್ಥೆ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ
ಹುದ್ದೆಗಳ ಹೆಸರು:      ಸಶಸ್ತ್ರ ಪೊಲೀಸ್‌ ಕಾನ್ಸ್‌ಟೇಬಲ್(‌CAR/DAR)
ಹುದ್ದೆಗಳ ಸಂಖ್ಯೆ:   1600 ಹುದ್ದೆಗಳು
ಕಲ್ಯಾಣ ಕರ್ನಾಟಕ – 179
ಮಿಕ್ಕುಳಿದ ವೃಂದದಲ್ಲಿ(ಕಲ್ಯಾಣ ಕರ್ನಾಟಕ ಹೊರತು ಪಡಿಸಿ ಉಳಿದ ಜಿಲ್ಲೆಗಳಲ್ಲಿ) – 1421
ವೇತನ:        ರೂ. 37,500-76100/-
ಉದ್ಯೋಗ ಸ್ಥಳ: ‌              ರಾಜಾದ್ಯಂತ
ಅರ್ಜಿ ಸಲ್ಲಿಸುವ ಬಗೆ: ಆನ್‌ಲೈನ್
ಆಯ್ಕೆ ಮಾಡುವ ವಿಧಾನ  ಲಿಖಿತ ಪರೀಕ್ಷೆ, ದೈಹಿಕ/ವೈದ್ಯಕೀಯ ಪರೀಕ್ಷೆ
ಅರ್ಜಿ ಸಲ್ಲಿಸುವ ವೆಬ್‌ ಸೈಟ್ ಲಿಂಕ್‌ ಕೆಳಗೆ ನೀಡಲಾಗಿದೆ

ವಿದ್ಯಾರ್ಹತೆ: Qualification

ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕರ್ನಾಟಕ ಪದವಿ ಪೂರ್ವ ಶಿಕ್ಷಣ ಮಂಡಳಿಯು ನಡೆಸುವ PUC ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು.

  • CBSC ಮತ್ತು ISC ಮಂಡಳಿಯು ನಡೆಸುವ ಕ್ಲಾಸ್‌ 12 ಪರೀಕ್ಷೆ
  • ರಾಜ್ಯ ಸರ್ಕಾರದ ಪರೀಕ್ಷಾ ಮಂಡಳಿಗಳಿಂದ ನಡೆದ 12 ನೇ ತರಗತಿಯಲ್ಲಿ ಪಾಸ ಆಗಿರಬೇಕು
  • ಎರಡು ವರ್ಷಗಳ ಐ.ಟಿ.ಐ ಕೋರ್ಸ್‌ ಮತ್ತು ಒಂದು ಶೈಕ್ಷಣಿಕ ವಿಷಯದಲ್ಲಿ ಅಥವಾ ಪದವಿ ಪೂರ್ವ ಮಂಡಳಿಯು ನಡೆಸುವ ಪರೀಕ್ಷೆಯಲ್ಲಿ ಒಂದು ಭಾಷೆ ಮತ್ತು ಒಂದು ವಿಷಯದಲ್ಲಿ ಉತ್ತೀರ್ಣರಾದಲ್ಲಿ ಮಾತ್ರ PUCಗೆ ತತ್ಸಮಾನ ಎಂದು ಪರಿಗಣಿಸಲಾಗುವುದು.
  • PUC ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಪಾಸ್‌ ಆಗಿ, ಅಂಕಪಟ್ಟಿಯನ್ನು ಹೊಂದಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬೇಕು.

ವಯೋಮಿತಿ & ವಯೋಮಿತಿ ಸಡಿಲಿಕೆ: Government Job Notification Age Relaxation Details

Government Job Notification

ಅಭ್ಯರ್ಥಿಯು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕದಂದು ಕನಿಷ್ಟ 18 ವರ್ಷ ಪೂರೈಸಿರಬೇಕು.

ವಯಸ್ಸು ವಯೋಮಿತಿ ಸಡಿಲಿಕೆ
ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ 33 ವರ್ಷಗಳು
ಪರಿಶೀಷ್ಟ ಜಾತಿ/ ಪರಿಶಿಷ್ಟ ಪಂಗಡ/ಪ್ರವರ್ಗ-1 ಮತ್ತು ಪ್ರವರ್ಗ 2A 2B 3A 3B ಅಭ್ಯರ್ಥಿಗಳಿಗೆ 35 ವರ್ಷಗಳು
ಕರ್ನಾಟಕ ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವ ಬುಡಕಟ್ಟು ಜನಾಂದ ಅಭ್ಯರ್ಥಿಗಳಿಗೆ 38 ವರ್ಷಗಳು
ಮಾಜಿ ಸೈನಿಕ ಅಭ್ಯರ್ಥಿಗಳಿಗೆ 3 ವರ್ಷ ರಿಯಾಯಿತಿ ನೀಡಲಾಗುತ್ತದೆ.

ಇದನ್ನು ಓದಿ:  Health Department Recruitment 2026: ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ; ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

Government Job Notification

ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು: Government Job Notification Documents Requirment

  • SSLC ಅಂಕಪಟ್ಟಿ
  • PUC ಅಥವಾ ತತ್ಸಮಾನ ಪ್ರಮಾಣ ಪತ್ರ
  • ಜಾತಿ ಪ್ರಮಾಣ ಪತ್ರ (ಅನ್ವಯಿಸಿದರೆ)
  • ಆದಾಯ ಪ್ರಮಾಣ ಪತ್ರ
  • ಗ್ರಾಮೀಣ ಅಭ್ಯರ್ಥಿ ಪ್ರಮಾಣ ಪತ್ರ
  • ಕನ್ನಡ ಮಾಧ್ಯಮ ಪ್ರಮಾಣ ಪತ್ರ
  • ಮಾಜಿ ಸೈನಿಕ ಪ್ರಮಾಣ ಪತ್ರ (ಅನ್ವಯಿಸಿದರೆ)
  • ಇತ್ತೀಚಿನ ಪಾಸ್‌ ಪೋರ್ಟ್‌ ಅಳತೆಯ ಭಾವಚಿತ್ರ
  • ಸಹಿಯ ಸ್ಕ್ಯಾನ ಪ್ರತಿ
  • ಆಧಾರ ಕಾರ್ಡ್

ವೇತನ ಶ್ರೇಣಿ: Salary

  • ನೇಮಕಾತಿ ಹೊಂದಿದ ಅಭ್ಯರ್ಥಿಗಳು ಪೊಲೀಸ್‌ ತರಬೇತಿ ಶಾಲೆಗಳಲ್ಲಿ ನಿಗಧಿಪಡಿಸಲಾಗುವ ಅವಧಿಗೆ ಮೂಲ ಬುನಾದಿ ತರಬೇತಿಯನ್ನು ಪಡೆಯಬೇಕು. ತರಬೇತಿಯಲ್ಲಿ ಅನುತ್ತೀರ್ಣರಾದ ಅಭ್ಯರ್ಥಿಗಳನ್ನು ಸೇವೆಯಿಂದ ವಜಾಗೊಳಿಸಲಾಗುವುದು.
  • ನೇರ ನೇಮಕಾತಿ ಮೂಲಕ ಆಯ್ಕೆಯಾದ ಅಭ್ಯರ್ಥಿಯು 2 ವರ್ಷ 6 ತಿಂಗಳು ನಂತರ ಖಾಯಂ ಮಾಡಲಾಗುತ್ತದೆ.
  • ವೇತನ ಶ್ರೇಣಿಯು ರೂ. 37500 ರಿಂದ 76100 ರವರೆಗೆ ನೀಡಲಾಗುತ್ತದೆ.
  • ಸೇವೆ ಸಲ್ಲಿಸುವ ಅಭ್ಯರ್ಥಿಗೆ ರಾಷ್ಟ್ರೀಯ ಪಿಂಚಣಿ ಯೋಜನೆಯ ಸೌಲಭ್ಯ ಅನ್ವಯವಾಗುತ್ತದೆ.

ಇದನ್ನು ಓದಿ: ಸರ್ಕಾರದಿಂದ ಮಹಿಳಾ ಸ್ವ ಸಹಾಯ ಸಂಘಗಳಿಗೆ ಭರ್ಜರಿ ಗಿಪ್ಟ್, 7 ರಿಂದ 15 ಲಕ್ಷದ ವರೆಗೆ ಸಹಾಯಧನ, ಇಲ್ಲಿದೆ ಸಂಪೂರ್ಣ ಮಾಹಿತಿ, NRLM Rural Women Entrepreneurship 

ಅರ್ಜಿ ಶುಲ್ಕ: Government Job Notification Application Fees Details

ವಿವರಗಳು  ಶುಲ್ಕ 
ಸಾಮಾನ್ಯ ಅರ್ಹತೆ ಮತ್ತು ಇತರೆ ಪ್ರವರ್ಗಗಳ ಅಭ್ಯರ್ಥಿಗಳಿಗೆ 

(ಪ್ರವರ್ಗ – 2A/2B/3A/3B)

ರೂ. 750/-
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪವರ್ಗ-1 ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳು ರೂ.500/-

Government Job Notification

ಅರ್ಜಿ ಸಲ್ಲಿಸುವ ವಿಧಾನ:  

ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‌ ಸೈಟ್(ಲಿಂಕ ಅನ್ನು ಕೆಳಗೆ ನೀಡಲಾಗಿದೆ) ನಲ್ಲಿ ಪ್ರವೇಶಿಸಿ, ಆನ್ಲೈನ್‌ ಮೂಲಕ ಅರ್ಜಿಯನ್ನು ಭರ್ತಿ ಮಾಡಬೇಕು. ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಪೂರ್ತಿಯಾಗಿ ಓದಿ ಅರ್ಥೈಸಿಕೊಂಡು ನಂತರ ಅರ್ಜಿ ಸಲ್ಲಿಸುವುದು.

ಇದನ್ನು ಓದಿ: ವಿದ್ಯಾರ್ಥಿಗಳಿಗೆ ಸಿಹಿಸುದ್ದಿ! SG Jindal Foundation Scholarship 2026: ಯಾರು ಅರ್ಜಿ ಸಲ್ಲಿಸಬಹುದು? ಸಂಪೂರ್ಣ ಮಾಹಿತಿ

 ಆಯ್ಕೆ ವಿಧಾನ: Government Job Notification Selection Method

  1. ಲಿಖಿತ ಪರೀಕ್ಷಾ ವಿಧಾನ:

ರಾಜ್ಯದ ವಿವಿದ ಜಿಲ್ಲಾ ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆಯನ್ನು ಆಪಲೈನ್-OMR ಮಾದರಿಯಲ್ಲಿ ನಡೆಸಲಾಗುತ್ತದೆ.  ಅಭ್ಯರ್ಥಿಗಳು ಕಡ್ಡಾಯವಾಗಿ ಪ್ರವೇಶ ಪತ್ರಗಳನ್ನು ಡೌನ್‌ ಲೋಡ್‌ ಮಾಡಿಕೊಂಡು ಒಂದು ಗುರುತಿನ ಚೀಟಿಯೊಂದಿಗೆ ಪರೀಕ್ಷಾ ಕೇಂದ್ರಗಳಿಗೆ ಹಾಜರಾಗುವುದು.
  1. ಪ್ರಶ್ನೆ ಪತ್ರಿಕೆ ಮತ್ತು ಪಠ್ಯ ಕ್ರಮ:
ಪತ್ರಿಕೆ/Paper ಲಿಖಿತ ಪರೀಕ್ಷೆ
ವಿಷಯ/ Subejct    ಸಾಮಾನ್ಯ ಜ್ಞಾನ ವಿಜ್ಞಾನ, ಭೂಗೋಳ, ಇತಿಹಾಸ, ಭಾರತ ಸಂವಿದಾನ, ರಾಷ್ಟ್ರಿಯ ಸ್ವಾತಂತ್ರ್ಯ ಚಳುವಳಿ, ಮಾನಸಿಕ ಸಾಮರ್ಥ್ಯ ಮತ್ತು ನೈತಿಕ ಶಿಕ್ಷಣ ಒಳಗೊಂಡ ಸಾಮಾನ್ಯ ಅಧ್ಯಯನ
ಒಟ್ಟು ಪ್ರಶ್ನೆಗಳು/ Total Questions 100
ಒಟ್ಟು ಅಂಕಗಳು/ Total Marks 100
ಅವಧಿ/ Duration
90 ನಿಮಿಷಗಳು
ಲಿಖಿತ ಪರೀಕ್ಷೆ 06.09.2026
ಸಮಯ ಬೆಳ್ಳಿಗ್ಗೆ 10.30 ರಿಂದ 12.00 ರವರೆಗೆ

 

      2. ಋಣಾತ್ಮಕ ಮೌಲ್ಯಮಾಪ:

 ಪ್ರತಿ ಪ್ರಶ್ನೆಗೆ 4 ಆಯ್ಕೆಗಳಿದ್ದೂ, ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕಗಳನ್ನು ಕಡಿತಗೊಳಿಸಲಾಗುತ್ತದೆ.

  1. ದೇಹದಾರ್ಢ್ಯತೆ ಮತ್ತು ಸಹಿಷ್ಣುತೆ ಪರೀಕ್ಷೆಗಳ ವಿವರ

ಅಭ್ಯರ್ಥಿಗಳು ಪಡೆದ ಅಂಕಗಳ ಆದಾರದ ಮೇಲೆ ಅರ್ಹತಾ ಪಟ್ಟಿಯನ್ನು ತಯಾರಿಸಲಾಗುತ್ತದೆ.  ಲಿಖಿತ ಪರೀಕ್ಷೆಯಲ್ಲಿ 1:5ರ ಅನುಪಾತದಡಿ ಆಯ್ಕೆಗೊಂಡ ಅಭ್ಯರ್ಥಿಗಳಿಗೆ ದೇಹದಾರ್ಢ್ಯತೆ ಪರೀಕ್ಷೆ(Physical Standard Test) ಮತ್ತು ಸಹಿಷ್ಣುತೆ ಪರೀಕ್ಷೆಗಳನ್ನು ನಡೆಸಲಾಗುತ್ತದೆ.

  1. ವೈದ್ಯಕೀಯ ಪರೀಕ್ಷೆ:

ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಆಯ್ಕೆಯಾದ ಅಭ್ಯರ್ಥಿಯು ವೈದ್ಯಕೀಯ ಮಂಡಳಿಯ ಮುಂದೆ ವೈದ್ಯಕೀಯ ಪರೀಕ್ಷೆಗೆ ಹಾಜರಾಗುವುದು. ಇದೇ ಸಂದರ್ಬದಲ್ಲಿ ಮೂಲ ದಾಖಲೆಗಳಾದ SSLC ಅಂಕ ಪಟ್ಟಿ, PUC ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ಮೀಸಲಾತಿ ಪ್ರಮಾಣ ಪತ್ರ,ಇತರೆ ಧಾಖಲೆಗಳನ್ನು ಜೆರಾಕ್ಸ ಪ್ರತಿಯ ಒಂದನ್ನು ಸಂಬಂದಪಟ್ಟ ಕಛೇರಿಗೆ ನೀಡುವುದು. ವೈದ್ಯಕೀಯ ಪರೀಕ್ಷಯಲ್ಲಿ ದೃಷ್ಟಿ ಪರೀಕ್ಷೆ, ಶ್ರವಣ ಶಕ್ತಿ, ಎದೆಯ ಕ್ಷ-ಕಿರಣ, ಇತರೆ ಪರೀಕ್ಷೆಗಳನ್ನು ಅಭ್ಯರ್ಥಿಯು ಎದುರಿಸಬೇಕು.

ಅರ್ಹತಾ ಷರತ್ತುಗಳು:

  • ಅಭ್ಯರ್ಥಿಯು ಭಾರತಿಯ ನಾಗರಿಕನಾಗಿರಬೇಕು.
  • ಒಬ್ಬ ಜೀವಂತ ಪತ್ನಿಯನ್ನು ಹೊಂದಿರಬೇಕು. ಹೆಚ್ಛಿನ ಜೀವಂತ ಪತ್ನಿಯರನ್ನು ಹೊಂದಿದಲ್ಲಿ ಸರ್ಕಾರದಿಂದ ಅನುಮತಿ ಪಡೆಯಬೇಕು.
  • ಅಭ್ಯರ್ಥಿಯು ಮಾನಸಿಕವಾಗಿ ಹಾಗು ದೈಹಿಕವಾಗಿ ಆರೊಗ್ಯವಂತನಾಗಿರಬೇಕು.
  • ಕೇಂದ್ರ ಅಥವಾ ಕರ್ನಾಟಕ ಅಥವಾ ಇತರೆ ಯಾವೂದೇ ರಾಜ್ಯದ ಲೋಕಸೇವಾ ಆಯೋಗ ಅಥವಾ ಕರ್ನಾಟಕ ಪರೀಕ್ಷಾ ಪ್ರಾದಿಕಾರದಿಂದ ನಡೆಯುವ ಪರೀಕ್ಷೆಗಳಲ್ಲಿ ಡಿಬಾರ್‌ ಆಗಿರಬಾರದು.

ಮೀಸಲಾತಿ:

ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಜಾತಿ ಮೀಸಲಾತಿ, ಮಾಜಿ ಸೈನಿಕ, ಗ್ರಾಮೀಣ ಅಭ್ಯರ್ಥಿ, ಕನ್ನಡ ಮಾದ್ಯಮ, ಯೋಜನಾ ನಿರಾರ್ಶಿತ ಮೀಸಲಾತಿ ಪಡೆಯಬಹುದಾಗಿದೆ.

ಇದನ್ನು ಓದಿ: Traffic Fine Discount 2026: ವಾಹನ ಸವಾರರಿಗೆ ಸಿಹಿಸುದ್ದಿ! ಬಾಕಿ ಟ್ರಾಫಿಕ್ ದಂಡಕ್ಕೆ ಮತ್ತೆ 50% ರಿಯಾಯಿತಿ, ಜೂನ್ 21ರಿಂದ ಜುಲೈ 10ರವರೆಗೆ ಅವಕಾಶ

ಪ್ರಮುಖ ಸೂಚನೆಯಗಳು Government Job Notification Importnant Points

  • ಅಭ್ಯರ್ಥಿಯು ತನ್ನ ಅರ್ಜಿಯನ್ನು ಸಲ್ಲಿಸುವಾಗ ಇತ್ತೀಚಿನ ಪಾಸ್‌ಪೊರ್ಟ ಸೈಜಿನ ಪೊಟೊಅನ್ನು 50 KB ಇಂದ 200 KB ಒಳಗೆ ಸಾಮರ್ಥ್ಯ ಇರಬೇಕು. ಜೊತೆಗೆ ಕಪ್ಪು ಸ್ಕೆಷ್‌ ಅಥವಾ ಮಾರ್ಕರ್‌ ಪೆನ್‌ ನಿಂದ ಸಹಿ ಮಾಡಿದ ಕಾಗದವನ್ನು ಸ್ಕ್ಯಾನ್‌ ಮಾಡಿ ಅಪಲೋಡ ಮಾಡಬೇಕು. ಭಾವಚಿತ್ರ ಮತ್ತು ಸಹಿಯನ್ನು ಅಪಲೋಡ್‌ ಮಾಡದ ಅರ್ಜಿಗಳನ್ನು ತಿರಸ್ಕೃತಗೊಳ್ಳುತ್ತದೆ.
  • ಅಧಿಕೃತ ವೆನ್‌ ಸೈಟ್ ನಲ್ಲಿ ನಿಗದಿತ ನಮೂನೆಯಲ್ಲಿ ಅಭ್ಯರ್ಥಿಯು ತನ್ನ ಮಾಹಿತಿಯನ್ನು ಹಾಕುವುದು. ಸದರಿ ಮಾಹಿತಿಗನುಗುಣವಾಗಿ ದಾಖಲೆಗಳನ್ನು ಹಾಜರಪಡಿಸುವುದು.
  • ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಎಲ್ಲಾ ಮಾಹಿತಿಯನ್ನು ಸರಿಯಾಗಿ ಹಾಕಬೇಕು. ಅರ್ಜಿಸಲ್ಲಿಸಿದ ನಮೂನೆಯ ಒಂದು ಪ್ರತಿಯನ್ನು ಪ್ರಿಂಟ್‌ ತೆಗೆದುಕೊಂಡು ಇಟ್ಟುಕೊಳ್ಳಬೇಕು. ಅರ್ಜಿ ಶುಲ್ಕವನ್ನು ಪಾವತಿ ಮಾಡಿದ ಚಲನ್‌ ಅನ್ನು ಆಯ್ಕೆ ಪ್ರಕ್ರಿಯೆ ಮುಗಿಯುವರೆಗೆ ತಮ್ಮ ಹತ್ತಿರ ಇಟ್ಟುಕೊಳ್ಳಬೇಕು.
  • ಹೆಚ್ಚಿನ ಮಾಹಿತಿಯಗಾಗಿ ಈ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಬಹುದು. ಮಾಹಿತಿ ಕೇಂದ್ರ – 080-23460460
  • ದುರ್ನಡತೆ: ಅರ್ಜಿ ಸಲ್ಲಿಸಿದ ಅಭ್ಯರ್ಥಿಯು ನಕಲಿ ವ್ಯಕ್ತಿಯಾಗಿರುವನೆಂದು ಅಥವಾ ಖೋಟಾ ದಸ್ತಾವೇಜು ಅಥವಾ ತಿದ್ದಲಾದ ದಾಖಲೆಗಳನ್ನು ಸಲ್ಲಿಸಿರುವನೆಂದು ಅಥವಾ ತಪ್ಪು ಅಥವಾ ಸುಳ್ಳು ಹೇಳಿಕೆ ನೀಡಿರುವನೆಂದು ಅಥವಾ ಅವಾಸ್ತವಿಕ ಮಾಹಿತಿ ನೀಡಿದ ಅಥವಾ ನೇಮಕಾತಿ ಉದ್ದೇಶಗಳಿಗಾಗಿ ನಡೆಸಲಾದ ಪರೀಕ್ಷೆಯಲ್ಲಿ ಅನುಚಿತ ಮಾರ್ಗವನ್ನು ಅನುಸರಿಸುತ್ತಿರುವನೆಂದು ತಿಳಿದರೆ ಶಿಸ್ತು ಕ್ರಮಕ್ಕೆ ಒಳಪಡಿಸಲಾಗುತ್ತದೆ. ನೇಮಕಾತಿ ಸಮಿತಿ ನಡೆಸುವ ಯಾವುದೇ ಪರೀಕ್ಷೆಗೆ ಪ್ರವೇಶ ಪಡೆಯುವದರಿಂದ ಅಥವಾ ಯಾವುದೇ ಹುದ್ದೆಯ ಆಯ್ಕೆಗೆ ಖಾಯಂ ಆಗಿ ಡಿಬಾರ ಮಾಡಲಾಗುವುದು.

Frequently Asked Questions (FAQ

  1. ಕರ್ನಾಟಕ ಪೊಲೀಸ ಕಾನ್ಸಟೇಬಲ್‌ ನೇಮಕಾತಿ 2026 ಕ್ಕೆ ಅರ್ಜಿ ಸಲ್ಲಿಸಲು ಯಾವ ವಿದ್ಯಾರ್ಹತೆ ಹೊಂದಿರಬೇಕು?

        PUC ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು

  1. ಪೊಲೀಸ್‌ ನೇಮಕಾತಿಯಲ್ಲಿ ಒಟ್ಟು ಹುದ್ದೆಗಳಿವೆ?

        1600 ಸಶಸ್ತ್ರ ಪೊಲೀಸ್‌ ಕಾನ್ಸ್ ಟೇಬಲ್‌ ಹುದ್ದೆಗಳಿವೆ

  1. ಕರ್ನಾಟಕ ಪೊಲೀಸ ಕಾನ್ಸಟೇಬಲ್‌ ವೇತನ ಎಷ್ಟು?

        ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ. 37500 ಇಂದ 76100 ರೂವರೆಗೆ ವೇತನ ನೀಡಲಾಗುತ್ತದೆ.

  1. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು?

        ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 22 ಜುಲೈ 2026

  1. ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ?

        ಲಿಖಿತ ಪರೀಕ್ಷೆ, ದೈಹಿಕ ಸಾಮರ್ಥ್ಯ ಪರೀಕ್ಷೆ(PST/PET) ಹಾಗೂ ವೈದ್ಯಕೀಯ ಪರೀಕ್ಷೆಯನ್ನು ಅಭ್ಯರ್ಥಿಯು

        ಎದುರಿಸಬೇಕಾಗುತ್ತದೆ.

‌ಪರೀಕ್ಷಾ ತಯಾರಿ Government Job Notification Preparation Tips

  • ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಿ.
  • ಸಾಮಾನ್ಯ ಜ್ಞಾನ ಮತ್ತು ಕರ್ನಾಟಕ ಇತಿಹಾಸ ಓದಿ.
  • ದಿನಪತ್ರಿಕೆ ಓದುವ ಅಭ್ಯಾಸ ಬೆಳೆಸಿಕೊಳ್ಳಿ
  • ಪ್ರತಿದಿನ ಮಾಕ್‌ ಟೆಸ್ಟ್‌ ಬರೆಯಿರಿ.
  • ದೈಹಿಕ ಪರೀಕ್ಷೆಗೆ ನಿಯಮಿತ ವ್ಯಾಯಾಮ ಮಾಡಿ.

Disclaimer

ಈ ಲೇಖನದಲ್ಲಿರುವ ಮಾಹಿತಿಯನ್ನು ಅಧಿಕೃತ ಅಧಿಸೂಚನೆಯ ಆದಾರದ ಮೇಲೆ ಸಿದ್ದಪಡಿಸಲಾಗಿದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸವ ಮೊದಲು ಅಧಿಕೃತ ಅಧಿಸೂಚನೆಯನ್ನು ಕಡ್ಡಾಯವಾಗಿ ಓದಬೇಕು. ಅಧಿಕೃತ ವೆಬ್‌ ಸೈಟ್‌ ನಲ್ಲಿ ಪ್ರಕಟವಾಗುವ ಮಾಹಿತಿಯೇ ಅಂತಿಮವಾಗಿರುತ್ತದೆ

ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಸುವ ದಿನಾಂಕ ಆರಂಭ: 22.06.2026
ಅರ್ಜಿ ಸಲ್ಲಿಸಲು ಮುಕ್ತಾಯದ ದಿನಾಂಕ:  22.07.2026
ಅರ್ಜಿ ಶುಲ್ಕ ಭರಿಸುವ ಕೊನೆಯ ದಿನಾಂಕ 24.07.2026

 

ಪ್ರಮುಖ ಲಿಂಕ್‌ ಗಳು:

ಅಧಿಕೃತ ವೆಬ್‌ ಸೈಟ್‌ ಇಲ್ಲಿ ಕ್ಲಿಕ್‌ ಮಾಡಿ
ಕಲ್ಯಾಣ ಕರ್ನಾಟಕ ನೇಮಕಾತಿ ಅಧಿಸೂಚನೆ ಇಲ್ಲಿ ಕ್ಲಿಕ್‌ ಮಾಡಿ
ವಾಟ್ಸ ಆಪ್‌ ಗ್ರುಪ್‌ ಲಿಂಕ ಇಲ್ಲಿ ಕ್ಲಿಕ್‌ ಮಾಡಿ
ಟೆಲಿಗ್ರಾಮ ಗ್ರುಪ್‌ ಲಿಂಕ್ ಇಲ್ಲಿ ಕ್ಲಿಕ್‌ ಮಾಡಿ

 

1 thought on “Government Job Notification : 1600 CAR/DAR ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್‌ ಹುದ್ದೆಗಳ ಭರ್ಜರಿ ನೇಮಕಾತಿ, ಅರ್ಜಿ ಆರಂಭ”

Leave a Comment