Health Department Job Recruitment 2026: ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ; ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Health Department Job Recruitment 2026 : ಕರ್ನಾಟಕ ರಾಜ್ಯ ನಿರುದ್ಯೋಗಿ ಯುವಕ ಮತ್ತು ಯುವತಿಯರಿಗೆ ಒಂದು ಸುವರ್ಣಾವಕಾಶ ಪ್ರಕಟವಾಗಿದೆ. ಆರೋಗ್ಯ ಮತ್ತು ಕುಟುಂಬ ಇಲಾಖೆಯಲ್ಲಿ ಖಾಲಿ ಇರುವ ಪಾರ್ಮಸಿ ಅಧಿಕಾರಿಗಳು ಮತ್ತು ಕಿರಿಯ ಪ್ರಯೋಗ ಶಾಲಾ ತಾಂತ್ರಿಕ ಅಧಿಕಾರಿ ಹುದ್ದೆಗಳ ನೇಮಕಾತಿಗಾಗಿ ಸರ್ಕಾರದಿಂದ ಅನುಮತಿ ದೊರೆತಿದೆ. ಆದ್ದರಿಂದ ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಇರಬೇಕಾದ ಅರ್ಹತೆಗಳು, ವಯೋಮಿತಿ, ಶೈಕ್ಷಣಿಕ ಅರ್ಹತೆ, ನೇಮಕಾತಿ ವಿಧಾನ, ಅರ್ಜಿ ಸಲ್ಲಿಸುವ ಬಗೆ ಇನ್ನಿತರ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ.
ಇದೆ ರೀತಿಯ ಮಾಹಿತಿಗಾಗಿ ನಮ್ಮನ್ನು ಬೆಂಬಲಿಸಲು ಈ ಕೆಳಗಿನ ಗ್ರುಪ್ಗಳಿಗೆ Join ಆಗಿ.
| Watsapp Group | ಕ್ಲಿಕ್ ಮಾಡಿ |
| Teligram Group | ಕ್ಲಿಕ್ ಮಾಡಿ |
ಉದ್ಯೋಗ ವಿವರ: Health Department Job Recruitment 2026
| ನೇಮಕಾತಿ ಸಂಸ್ಥೆ: | ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ |
| ಹುದ್ದೆಗಳ ಹೆಸರು | 1. ಫಾರ್ಮಸಿ ಅಧಿಕಾರಿಗಳು ಮತ್ತು
2. ಕಿರಿಯ ಪ್ರಯೋಗ ಶಾಲಾ ತಾಂತ್ರಿಕ ಅಧಿಕಾರಿ |
| ಹುದ್ದೆಗಳ ಸಂಖ್ಯೆ: | 400+400= 800 ಹುದ್ದೆಗಳು |
| ಉದ್ಯೋಗ ಸ್ಥಳ: | ರಾಜ್ಯ ಎಲ್ಲಾ ಜಿಲ್ಲೆಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ |
| ಅರ್ಜಿ ಸಲ್ಲಿಸುವ ದಿನಾಂಕ ಆರಂಭ | ಇನ್ನೂ ಪ್ರಕಟವಾಗಿಲ್ಲ |
| ಅರ್ಜಿ ಸಲ್ಲಿಸಲು ಮುಕ್ತಾಯದ ದಿನಾಂಕ | ಇನ್ನೂ ಪ್ರಕಟವಾಗಿಲ್ಲ |
| ಅರ್ಜಿ ಶುಲ್ಕ ಭರಿಸುವ ಕೊನೆಯ ದಿನಾಂಕ | ಇನ್ನೂ ಪ್ರಕಟವಾಗಿಲ್ಲ |
| ಆಯ್ಕೆ ಮಾಡುವ ವಿಧಾನ | ನೇರ ಗುತ್ತಿಗೆ ನೇಮಕಾತಿ |
| ಅಧಿಕೃತ ಅಧಿಸೂಚನೆ | ಕೆಳಗೆ ನೀಡಲಾಗಿದೆ |
| ಅಧಿಕೃತ ಕಛೇರಿ ವೆಬ್ ಸೈಟ್ | ಕ್ಲಿಕ್ ಮಾಡಿ |
ಇದನ್ನು ಓದಿ: Government Job Notification: 1600 CAR/DAR ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗಳ ಭರ್ಜರಿ ನೇಮಕಾತಿ, ಅರ್ಜಿ ಆರಂಭ
ಹುದ್ದೆಗಳ ವಿವರ: Health Department Job Recruitment 2026 Job details
| ಹುದ್ದೆಗಳ ವಿವರ | ಹುದ್ದೆಗಳ ಸಂಖ್ಯೆ |
| ಫಾರ್ಮಸಿ ಅಧಿಕಾರಿಗಳು | 400 |
| ಕಿರಿಯ ಪ್ರಯೋಗ ಶಾಲಾ ತಾಂತ್ರಿಕ ಅಧಿಕಾರಿ | 400 |
| ಒಟ್ಟು | 800 |
Health Department job Recruitment 2026 : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಜಿಲ್ಲಾ, ತಾಲೂಕು ಮತ್ತು ಸಮುದಾಯ ಮಟ್ಟದ ಆರೋಗ್ಯ ಕೇಂದ್ರಗಳಲ್ಲಿ ಖಾಲಿ ಇರುವ 400 ಫಾರ್ಮಸಿ ಅಧಿಕಾರಿಗಳು ಮತ್ತು 400 ಕಿರಿಯ ಪ್ರಯೋಗ ಶಾಲಾ ತಾಂತ್ರಿಕ ಅಧಿಕಾರಿಗಳು ಹೀಗೆ ಒಟ್ಟು 800 ಹುದ್ದೆಗಳನ್ನು ಭರ್ತಿ ಮಾಡಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತಾಲಯ ದಿಂದ ಅನುಮತಿ ನೀಡಿ, ಅಗತ್ಯ ಕ್ರಮ ಕೈಗೊಳ್ಳಲು ಪತ್ರದ ಮೂಲಕ ತಿಳಿಸಿದ್ದಾರೆ.
ಸರ್ಕಾರದ ಪತ್ರವನ್ನು ಈ ಲೇಖನದ ಮುಂದಿನ ಭಾಗದಲ್ಲಿ ನೀಡಲಾಗಿದೆ.
ವಿದ್ಯಾರ್ಹತೆ: Health Department Job Recruitment 2026 Qualification
| ಹುದ್ದೆಗಳ ಹೆಸರು | ಶೈಕ್ಷಣಿಕ ಅರ್ಹತೆ |
| ಫಾರ್ಮಸಿ ಅಧಿಕಾರಿಗಳು | D Pharma Degree |
| ಕಿರಿಯ ಪ್ರಯೋಗ ಶಾಲಾ ತಾಂತ್ರಿಕ ಅಧಿಕಾರಿ | Diploma in Laboratary |
- ಫಾರ್ಮಸಿ ಅಧಿಕಾರಿಗಳು ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ ಶಾಲೆಗಳಲ್ಲಿ ಡಿ.ಪಾರ್ಮಾ ಕೋರ್ಸ ಅನ್ನು ಪೂರೈಸಿರಬೇಕು ಮತ್ತು ಕರ್ನಾಟಕ ಫಾರ್ಮಸಿ ಕೌನ್ಸಿಲಿಂಗ್ ನಲ್ಲಿ ನೊಂದಣಿಯಾಗಿರಬೇಕು.
- ಕಿರಿಯ ಪ್ರಯೋಗ ಶಾಲಾ ತಾಂತ್ರಿಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಕರ್ನಾಟಕ ಸರ್ಕಾರದಿಂದ ಅನುಮತಿ ಪಡೆದ ಶೈಕ್ಷಣಿಕ ಸಂಸ್ಥೆಗಳಲ್ಲಿ ಡಿಪ್ಲೋಮಾ ಇನ್ ಲ್ಯಾಬೋರೆಟರಿ ತಾಂತ್ರಿಕ ವಿದ್ಯಾರ್ಹತೆ ಪಡೆದಿರಬೇಕು.
ಷರತ್ತುಗಳು ಮತ್ತು ನಿಬಂದನೆಗಳು: Health Department Job Recruitment 2026 Instructions
- ಈ ನೇಮಕಾತಿಯಲ್ಲಿ ಸರ್ಕಾರದ ಮೀಸಲಾತಿ ಸುತ್ತೋಲೆ ಪ್ರಕಾರ ಮಿಸಲಾತಿಯ ಪ್ರಕಾರ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
- ಈ ನೇಮಕಾತಿಯಡಿ ಆಯ್ಕೆಯಾಗುವ ಅಭ್ಯರ್ಥಿಗಳ ಕಾರ್ಯಾವಧಿ ಒಂದು ವರ್ಷಕ್ಕೆ ಸಿಮಿತಗೊಳಿಸಲಾಗಿದೆ.
- ಗುತ್ತಿಗೆ ಆಧಾರದ ಮೇಲೆ ಆಯ್ಕೆಗೊಂಡ ಅಭ್ಯರ್ಥಿಗಳಿಗೆ ವಿಶ್ರಾಂತಿ ವೇತನ, ಉಪದಾನ, ವೇತನ ಶ್ರೇಣಿ ಮತ್ತು ಇನ್ನಿತರ ಯಾವುದೇ ಭತ್ಯೆಗೆ ಅರ್ಹರಿರುವುದಿಲ್ಲ.
- ಖಾಲಿ ಇರುವ ಸ್ಥಳಗಳಿಗೆ ಆಯ್ಕೆ ಮಾಡಿಕೊಳ್ಳುವುದರಿಂದ ಅಭ್ಯರ್ಥಿಗಳು ಆಯ್ಕೆಯಾದ ನಂತರ ಸ್ಥಳದ ವರ್ಗಾವಣೆ, ಪರಸ್ಪತ ವರ್ಗಾವಣೆ ಅಥವಾ ನಿಯೋಜನೆಗಾಗಲಿ ಅವಕಾಶ ಇರುವುದಿಲ್ಲ
- ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ಅಂಕಪಟ್ಟಿ, ಜನ್ಮ ದಿನಾಂಕ ಮತ್ತು ಇತರೆ ಮೂಲ ದಾಖಲೆಗಳನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧೀಕಾರಿಗಳ ಕಛೇರಿಗೆ ಹಾಜರಪಡಿಸುವುದು.
- ಗುತ್ತಿಗೆ ಆಧಾರದ ಕಿರಿಯ ಪ್ರಯೋಗ ಶಾಲಾ ತಾಂತ್ರಿಕ ಅಧಿಕಾರಿ ಮತ್ತು ಫಾರ್ಮಸಿ ಅಧಿಕಾರಿಗಳ ಹುದ್ದೆಗಳನ್ನು ಯಾವುದೇ ಸಮಯದಲ್ಲಿ ಯಾವುದೇ ಕಾರಣವಿಲ್ಲದೆ ಒಂದು ತಿಂಗಳು ನೋಟಿಸ್ ನೀಡಿ ಕರ್ತವ್ಯದಿಂದ ಬಿಡುಗಡೆಗೊಳಿಸಲಾಗುತ್ತದೆ.
- ಕಾರ್ಯಕ್ಷಮತೆಯ ಬಗ್ಗೆ ದೂರು ಬಂದಲ್ಲಿ ಒಂದು ವಾರದ ನೋಟಿಸ್ ಕೊಟ್ಟು ಅಭ್ಯರ್ಥಿಗೆ ಸ್ಪಷ್ಟನೆ ನೀಡಲು ಅವಕಾಶ ನೀಡಿ ಕರ್ತವ್ಯದಿಂದ ಬಿಡುಗಡೆಗೊಳಿಸಲಾಗುತ್ತದೆ.
- ದುರ್ನಡತೆಯಿಂದಾಗಿ ನಷ್ಟ ಉಂಟಾದಲ್ಲಿ ಅದನ್ನು ಸರ್ಕಾರಕ್ಕೆ ತುಂಬಿಕೊಡುವ ಷರತ್ತಿಗೆ ಬದ್ದರಾಗಿರಬೇಕು.
- ಗುತ್ತಿಗೆ ಆಧಾರದ ಮೇಲೆ ಆಯ್ಕೆಗೊಂಡ ಅಭ್ಯರ್ಥಿಗಳ ಹುದ್ದೆಗಳು ಖಾಯ ನೇಮಕಾತಿಗಾಗಿ, ವಿಶ್ರಾಂತಿ ವೇತನಕ್ಕಾಗಲಿ, ನಿವೃತ್ತ ಉಪದಾನ, ವೇತನ ಶ್ರೇಣಿ ಅಥವಾ ಇನ್ನೀತರ ಯಾವುದೇ ಭತ್ಯೆಗಳನ್ನು ಪಡೆಯುವ ಹಕ್ಕನ್ನು ಹೊಂದಿರುವುದಿಲ್ಲ.
- ರಾಷ್ಟ್ರೀಯ ಆರೋಗ್ಯ ಅಭಿಯಾನದ ಸುತ್ತೋಲೆ ಪ್ರಕಾರ ತಾತ್ಕಾಲಿಕ ಸರ್ಕಾರಿ ನೌಕರರಿಗೆ ಸಿಗುವ ರಜೆಗಳನ್ನು ನೀಡಲಾಗುತ್ತದೆ.
- ಮಾತೃತ್ವ ರಜೆಯನ್ನು ರಜೆಯ ಪ್ರಾರಂಭದ ದಿನಾಂಕದಿಂದ ಗರಿಷ್ಟ 180 ದಿನಗಳವರೆಗೆ ಮಂಜೂರು ಮಾಡಲಾಗುತ್ತದೆ.
- ಪುರುಷ ನೌಕರರ ಪತ್ನಿಗೆ ಹೆರಿಗೆಯಾದ ದಿನಾಂಕದಿಂದ 15 ದಿವಸಗಳ ಪಿತೃತ್ವ ರಜೆಯನ್ನು ನೀಡಲಾಗುತ್ತದೆ.
- ಗರ್ಭಸ್ರಾವ ಅಥವಾ ಗರ್ಭಪಾತದಿಂದ ಗರ್ಭಧಾರಣೆಯು ಪರ್ಯಾವಸಾನಗೊಂಡ ಸಂದರ್ಭದಲ್ಲಿ ಮಾತೃತ್ವ ರಜೆಯು 6 ವಾರಗಳನ್ನು ಮೀರಬಾರದು. ಇಂತಹ ರಜೆಗಾಗಿ ಸಲ್ಲಿಸಿದ ಅರ್ಜಿಯು ನೋಂದಾಯಿತ ವೃತ್ತಿನಿರತ ವೈದ್ಯರಿಂದ ಪಡೆದ ವೈದ್ಯಕೀಯ ಪ್ರಮಾಣ ಪತ್ರ ನೀಡಬೇಕು.
- ಮಾತೃತ್ವ ರಜೆಯ ಮೇಲೆ ತೆರಳುವ ಸಿಬ್ಬಂದಿಗಳಿಗೆ ರಜೆಯ ನಿಕಟಪೂರ್ವದಲ್ಲಿ ಪಡೆಯುತ್ತಿದ್ದ ವೇತನಕ್ಕೆ ಸಮನಾದ ವೇತನವನ್ನು ರಜೆಯ ಅವದಿಯಲ್ಲಿ ಪಡೆಯಲು ಅರ್ಹರಿರುತ್ತಾರೆ.
- ಎರಡು ಅಥವಾ ಹೆಚ್ಚು ಮಕ್ಕಳನ್ನು ಹೊಂದಿರುವ ಮಹಿಳಾ ಸಿಬ್ಬಂದಿಗಳಿಗೆ ಈ ಮಾತೃತ್ವ ರಜೆಯನ್ನು ಮಂಜೂರು ಮಾಡತಕ್ಕದಲ್ಲ.
- ಮಾತೃತ್ವ ರಜೆಗಾಗಿ ಅರ್ಜಿ ಸಲ್ಲಿಸುವ ಅರ್ಜಿಯೊಂದಿಗೆ ಸಂಬಂದಿತ ಮಹಿಳಾ ಸಿಬ್ಬಂದಿಗಳು ಈ ಕುರಿತು ಸ್ವಯಂ ಘೋಷಣೆಯನ್ನು ಮಾತೃತ್ವ ರಜೆಯನ್ನು ಮಂಜೂರು ಮಾಡುವ ಅಧಿಕಾರಿಗೆ ಸಲ್ಲಿಸತಕ್ಕದ್ದು.
- ಗುತ್ತಿಗೆ ಆಧಾರದ ಮೇಲೆ ನೇಮಕವಾಗುವ ಮಹಿಳಾ ಸಿಬ್ಬಂದಿಗಳಿಗೆ ಗರಿಷ್ಠ 180 ದಿನಗಳವರೆಗೆ ಮಾತೃತ್ವ ರಜೆಯನ್ನು ಈ ಕೆಳಕಂಡ ನಿಯತಗೊಳಿಸತಕ್ಕದ್ದು.
- ಆಯ್ಕೆ ಹೊಂದಿದ ಕಿರಿಯ ಪ್ರಯೋಗ ಶಾಲಾ ತಾಂತ್ರಿಕ ಅಧಿಕಾರಿ ಹಾಗೂ ಫಾರ್ಮಸಿ ಅಧಿಕಾರಿಗಳ ಹುದ್ದೆಗಳನ್ನು ಕರ್ತವ್ಯಕ್ಕೆ ಹಾಜರಾಗುವ ಮೊದಲು ಮೇಲಿನ ಎಲ್ಲಾ ನಿಬಂದನೆಗಳನ್ನು ಒಪ್ಪಿಕೊಂಡಿರುವಂತೆ ರೂ 100 ಛಾಪಾ ಕಾಗದದ ಮೇಲೆ ಮುಚ್ಚಳಿಕೆಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧೀಕಾರಿಗಳಿಗೆ ಬರೆದು ಕೊಡುವುದು.
- ಕಿರಿಯ ಪ್ರಯೋಗ ಶಾಲಾ ತಾಂತ್ರಿಕ ಅಧಿಕಾರಿ ಮತ್ತು ಫಾರ್ಮಸಿ ಅಧಿಕಾರಿಗಳು ಪ್ರಾಥಮಿಕ ಆರೋಗ್ಯ ಕೇಂದ್ರದ ಕೇಂದ್ರ ಸ್ಥಾನದಲ್ಲಿ ವಾಸಿಸತಕ್ಕದ್ದು.
ಆಯ್ಕೆ ಸಮಿತಿ:
| ಕ್ರ.ಸಂ | ಹುದ್ದೆಗಳು | ಪದನಾಮ |
| 1 | ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ | ಅಧ್ಯಕ್ಷರು |
| 2 | ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು | ಸದಸ್ಯ ಕಾರ್ಯದರ್ಶಿ |
| 3 | ಪ್ರಾಂಶುಪಾಲರು, ಜಿಲ್ಲಾ ತರಬೇತಿ ಕೇಂದ್ರ | ಸದಸ್ಯರು |
| 4 | ಜಿಲ್ಲಾ ಶಸ್ತ್ರ ಚಿಕಿತ್ಸಕರು/ ವೈದ್ಯಕೀಯ ಅಧಿಕ್ಷಕರು | ಸದಸ್ಯರು |
| 5 | ಆರ್.ಸಿ.ಎಚ್ ಅಧಿಕಾರಿಗಳು | ಸದಸ್ಯರು |
ಇದನ್ನು ಓದಿ: Health Department Job Recruitment 2026 :
ವಯೋಮಿತಿ : Health Department Job Recruitment 2026 Age Details
ಅರ್ಜಿ ಸಲ್ಲಿಸಲು ಅರ್ಹತೆ ಇರುವ ಅಭ್ಯರ್ಥಿಗಳಿಗೆ 45 ವರ್ಷ ಒಳಗಿರಬೇಕು.
ವೇತನ ಶ್ರೇಣಿ:
ಕಾರ್ಮಿಕ ಇಲಾಖೆ ಹೊರಡಿಸಿದ ಅಧಿಸೂಚನೆಯಂತೆ ಕನಿಷ್ಟ ವೇತನ ನೀಡಲಾಗುತ್ತದೆ.
ಅರ್ಜಿ ಶುಲ್ಕ:
ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ.
ಅರ್ಜಿ ಸಲ್ಲಿಸುವ ವಿಧಾನ:
- ಇಲಾಖೆಯ ವತಿಯಿಂದ ಸಾರ್ವಜನಿಕರ ತಿಳುವಳಿಕೆಗಾಗಿ ರಾಜ್ಯ ಮಟ್ಟದ ಒಂದು ಮತ್ತು ಸ್ಥಳಿಯ ದಿನ ಪತ್ರಿಕೆಯಲ್ಲಿ ಅರ್ಜಿ ಆಹ್ವಾನಿಸಿದ ಪ್ರಕಟನೆ ಹೊರಡಿಸಿ ಅರ್ಹ ಅಭ್ಯರ್ಥಿಗಳನ್ನುಸಂದರ್ಶನಕ್ಕೆ ಆಹ್ವಾನಿಸಲಾಗುತ್ತದೆ.
- ರಾಜ್ಯ ಮತ್ತು ಜಿಲ್ಲಾ ಮಟ್ಟದ ಎಲ್ಲಾ ಆರೋಗ್ಯ ಇಲಾಖೆಗಳ ಕಛೇರಿಯ ಸೂಚನಾ ಫಲಕದಲ್ಲಿ ಮತ್ತು ಅಧಿಕೃತ ಇಲಾಖೆಯ ಅಂತರ್ಜಾಲದಲ್ಲಿ ಈ ನೇಮಕಾತಿಯ ಕುರಿತು ಮಾಹಿತಿಯನ್ನು ಲಗತ್ತಿಸಲಾಗುತ್ತದೆ.
- ಅರ್ಜಿಗಳನ್ನು ಯಾವುದೇ ಶುಲ್ಕವಿಲ್ಲದೇ ವಿತರಿಸಲಾಗುವುದು.
ಆಯ್ಕೆ ವಿಧಾನ:
- ಪಾರ್ಮಸಿ ಅಧಿಕಾರಿಗಳು ಮತ್ತು ಕಿರಿಯ ಪ್ರಯೋಗ ಶಾಲಾ ತಾಂತ್ರಿಕ ಅಧಿಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಪ್ರತಿ ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚಿಸಲಾದ ಆಯ್ಕೆ ಸಮಿತಿ ನಿರ್ಣಯದ ಅನುಗುಣವಾಗಿ ನೇರ ಗುತ್ತಿಗೆ ಆಧಾರದಲ್ಲಿ ಸಂದರ್ಶನದ ಮೂಲಕ ನೇಮಕ ಮಾಡಿಕೊಳ್ಳಲಾಗುತ್ತದೆ.
- ನೇಮಕಾತಿ ಪ್ರಕ್ರಿಯೆ ಜಿಲ್ಲಾ ಹಂತದಲ್ಲಿಯೇ ನಡೆಸಲಾಗುತ್ತದೆ.
ಪ್ರಮುಖ ಲಿಂಕ್ ಗಳು:
| ಅಧಿಕೃತ ಅಧಿಸೂಚನೆ | ಕ್ಲಿಕ್ ಮಾಡಿ |
| ಅಧಿಕೃತ ಕಛೇರಿ ವೆಬ್ ಸೈಟ್ | ಕ್ಲಿಕ್ ಮಾಡಿ |
| Watsapp Group | ಕ್ಲಿಕ್ ಮಾಡಿ |
| Teligram Group | ಕ್ಲಿಕ್ ಮಾಡಿ |